
ಈಗಿನ ಪರಿಸ್ಥಿತಿಯಲ್ಲಿ ಆರ್ಥಿಕ ವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಒಂದು ಕೆಲಸ ನೆಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಬಿಡುವಿನ ಸಮಯದಲ್ಲಿ ಮತ್ತೊಂದು ಗಳಿಕೆ ದಾರಿ ಹುಡುಕಬೇಕು. ಕಚೇರಿ ಕೆಲಸದ ಜೊತೆಯೇ ಸಣ್ಣ ಬ್ಯುಸಿನೆಸ್ ಶುರು ಮಾಡಬಹುದು. ಈ ಮೂಲಕ ಲಕ್ಷಾಂತರ ರೂಪಾಯಿ ಗಳಿಕೆ ಮಾಡಬಹುದು. ಆನ್ಲೈನ್ ಮೂಲಕವೂ ನೀವು ಗಳಿಕೆ ಮಾಡಬಹುದು.
ಸೀಮೆಸುಣ್ಣ ಅಂದ್ರೆ ಚಾಕ್ ಪೀಸ್ ತಯಾರಿಕೆ ವ್ಯವಹಾರ ಶುರು ಮಾಡಬಹುದು. ಇದಕ್ಕೆ ಕಡಿಮೆ ಬಂಡವಾಳ ಸಾಕು. ಇದನ್ನು ಕೇವಲ 10,000 ರೂಪಾಯಿಗಳಲ್ಲಿ ಮನೆಯಿಂದಲೇ ಶುರು ಮಾಡಬಹುದು. ಸೀಮೆಸುಣ್ಣವನ್ನು ತಯಾರಿಸಲು ಹೆಚ್ಚಿನ ವಸ್ತುಗಳ ಅಗತ್ಯವಿಲ್ಲ. ಚಾಕ್ ಪೀಸನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಲಾಗುತ್ತದೆ. ಇದು ಬಿಳಿ ಬಣ್ಣದ ಪುಡಿ. ಇದು ಒಂದು ರೀತಿಯ ಜೇಡಿಮಣ್ಣು.
ಸದ್ಯ ಶಾಲೆ ಶುರುವಾಗಿದೆ. ಹಾಗಾಗಿ ಶಾಲೆಗಳಿಗೆ ಭೇಟಿ ನೀಡಿ ನೀವು ಅಲ್ಲಿಯೂ ಚಾಕ್ ಪೀಸ್ ಮಾರಾಟ ಮಾಡಬಹುದು. ಪ್ರತಿ ಶಾಲೆ-ಕಾಲೇಜುಗಳಿಗೆ ಇದ್ರ ಅವಶ್ಯಕತೆಯಿದೆ. ಶಾಲೆಯಲ್ಲಿ ಮಾತ್ರವಲ್ಲ ಮಾರುಕಟ್ಟೆಯಲ್ಲೂ ನೀವು ಇದನ್ನು ಮಾರಾಟ ಮಾಡಬಹುದು. ಚಾಕ್ ಪೀಸ್ ಬಾಕ್ಸ್ ಬೆಲೆ 10 ರಿಂದ 600 ರೂಪಾಯಿಗೆ ಮಾರಾಟವಾಗುತ್ತದೆ. ಆನ್ಲೈನ್ ನಲ್ಲಿಯೂ ನೀವು ಇದನ್ನು ಮಾರಾಟ ಮಾಡಬಹುದು. ಇದಕ್ಕೆ ನೀವೇ ಬೆಲೆ ನಿಗದಿ ಮಾಡಬಹುದು.
ಚಾಕ್ ಪೀಸ್ ಮಾತ್ರವಲ್ಲ, ಲಕೋಟೆ ತಯಾರಿಸಿಯೂ ನೀವು ಗಳಿಸಬಹುದು. ಲಕೋಟೆ ತಯಾರಿಸುವುದು ತುಂಬಾ ಸರಳ. ಕಾಗದ ಅಥವಾ ಕಾರ್ಡ್ ಬೋರ್ಡ್‌ನಿಂದ ಇದನ್ನು ತಯಾರಿಸಬಹುದು. ಈ ವ್ಯವಹಾರಕ್ಕೂ 10,000 ರಿಂದ 30,000 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ವ್ಯವಹಾರ ಬಯಸುವವರು ಯಂತ್ರದ ಸಹಾಯದಿಂದ ಇದನ್ನು ತಯಾರಿಸಬಹುದು. ಪಾಲಿಥಿನ್ ಬದಲಿಗೆ ಪೇಪರ್ ಲಕೋಟೆಗೆ ಬೇಡಿಕೆ ಹೆಚ್ಚಾಗಿದೆ. ಗಿಫ್ಟ್ ಪ್ಯಾಕಿಂಗ್ ನಿಂದ ಹಿಡಿದು ತರಕಾರಿ ಇಡುವವರೆಗೆ ಲಕೋಟೆಗಳನ್ನು ಬಳಸಲಾಗುತ್ತಿದೆ. ಇದಕ್ಕೆ ಬೇಡಿಕೆ ಹೆಚ್ಚಿದ್ದು, ಒಳ್ಳೆಯ ಬೆಲೆ ಕೂಡ ಸಿಗ್ತಿದೆ.