
ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದವು ಮತ್ತು ಸಾವಿನ ಸಂಖ್ಯೆ ಹೆಚ್ಚಾದಂತೆ ಪ್ರತಿದಿನವೂ ನೋವಿನ ಅನುಭವವಾಗಿತ್ತು. ವಿಶೇಷವಾಗಿ ತಮ್ಮ ಕುಟುಂಬ ಸದಸ್ಯರಿಗೆ ಹಾಸಿಗೆ ವ್ಯವಸ್ಥೆ ಮಾಡಲು ಜನರು ಪಡುತ್ತಿದ್ದ ಗೋಳಾಟ ಆ ದೇವರಿಗೇ ಪ್ರೀತಿ.
ಆದರೆ ಈಗ, ಸ್ಟ್ಯಾಂಡ್-ಅಪ್ ಕಾಮಿಡಿಯನ್, ಡೇನಿಯಲ್ ಫೆರ್ನಾಂಡಿಸ್ ಅವರು ಕೋವಿಡ್ ಸಮಯದ ಕೆಲವೊಂದು ಸನ್ನಿವೇಶಗಳ ಹಾಸ್ಯ ಮಾಡಿದ್ದು ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಜನರು ಮಾರಣಾಂತಿಕ ಕಾಯಿಲೆಗೆ ಬಲಿಯಾದ ಕರಾಳ ಸಮಯವನ್ನು ಅವರು ಜೋಕ್ ಆಗಿ ತೆಗೆದುಕೊಂಡಿದ್ದಾರೆ. ಇವರ ಜೋಕ್ಗೆ ಅಲ್ಲಿದ್ದವರೂ ನಕ್ಕಿದ್ದಾರೆ.
ವೀಡಿಯೊದಲ್ಲಿ, ಡೇನಿಯಲ್ ಫೆರ್ನಾಂಡಿಸ್, ಜನರು ವೆಂಟಿಲೇಟರ್‌ಗಳು, ಐಸಿಯು ಹಾಸಿಗೆಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳ ಅವಶ್ಯಕತೆಗಳನ್ನು ಹಂಚಿಕೊಳ್ಳು ಸಂದರ್ಭಕ್ಕೂ ಇವರು ಹಾಸ್ಯ ಮಾಡಿದ್ದು, ಜನರು ಸಿಕ್ಕಾಪಟ್ಟೆ ಉಗಿಯುತ್ತಿದ್ದಾರೆ.