ವಾಷಿಂಗ್ಟನ್: ಆಫ್ಘಾನಿಸ್ತಾನ ಸೇನೆ ತಾಲಿಬಾನ್ ವಿರುದ್ಧ ಹೋರಾಟ ನಡೆಸುತ್ತಿಲ್ಲ ಎಂದು ಆಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ
ಅಶ್ರಫ್ ಘನಿ ಅವರ ನಂಬಿಕೆಯನ್ನು ಸೇನೆ ಹುಸಿಗೊಳಿಸಿದೆ. ಸೇನೆ ಉಗ್ರರ ವಿರುದ್ಧ ಹೋರಾಟ ನಡೆಸಿಲ್ಲ. ಆಫ್ಘನ್ ಸೇನೆಯನ್ನು ನಂಬಿ ಅಮೆರಿಕಾದ ಜೀವ ಬಲಿ ಕೊಡಲಾಗುವುದಿಲ್ಲ. ಅಫ್ಘಾನಿಸ್ತಾನ ಸರ್ಕಾರದಲ್ಲಿ ಭ್ರಷ್ಟಾಚಾರದ ಸಮಸ್ಯೆ ತುಂಬಿತ್ತು. ಆ ಜನರಿಗೆ ನಾವು ಮಾನವೀಯತೆ ನೆರವು ನೀಡಲಿದ್ದೇವೆ. ಅಮೆರಿಕ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಯತ್ನಿಸುತ್ತಿದೆ. ಅಮೆರಿಕನ್ನರನ್ನು ಸ್ಥಳಾಂತರ ಮಾಡಲು ಸೇನೆ ನಿಯೋಜಿಸಲಾಗಿದೆ. 6000 ಸೈನಿಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಆಫ್ಘನ್ ಸೇನೆ ಸೋತ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ. ಆಫ್ಘಾನಿಸ್ಥಾನದಲ್ಲಿ ಅಮೆರಿಕ ಹಲವು ತಪ್ಪು ಹೆಜ್ಜೆ ಇಟ್ಟಿದೆ. ಹಿಂದಿನ ಅಧ್ಯಕ್ಷರು ಮಾಡಿದ ತಪ್ಪು ನಾನು ಸಿದ್ಧನಿಲ್ಲ. ಅಮೆರಿಕದ ನಾಗರೀಕರನ್ನು ತಪ್ಪುದಾರಿಗೆ ಎಳೆಯುವುದಿಲ್ಲ ಎಂದು ಹೇಳಿದ್ದಾರೆ.