ಪ್ರೀಸ್ಟ್ ಸ್ಟಾನ್ ಸ್ವಾಮಿ ಅವರನ್ನು ’ಜೈಲಿನಲ್ಲಿ ಕೊಲ್ಲಲಾಗಿದೆ’ ಎಂದು ಆಪಾದನೆ ಮಾಡಿರುವ ಶಿವಸೇನಾ ಸಂಸದ ಸಂಜಯ್ ರಾವತ್, ಆತನ ಬಗ್ಗೆ ಕೇಂದ್ರ ಸರ್ಕಾರಕ್ಕೆ ಭಯವಿತ್ತು ಎಂದು ವಾರದ ಎಡಿಟೋರಿಯಲ್ ’ರೋಖ್‌ಥಾಕ್’ನಲ್ಲಿ ಬರೆದಿದ್ದಾರೆ.
ಎಲ್ಗರ್ ಪರಿಶದ್-ಮಾವೋಗಳ ಲಿಂಕ್ ಇದ್ದ ಆಪಾದನೆ ಮೇಲೆ ಸ್ಟಾನ್ ಸ್ವಾಮಿ ಅವರು ಕಸ್ಟಡಿಯಲ್ಲಿ ಮೃತಪಟ್ಟಿರುವುದನ್ನು ’ಮಾವೋಗಳು ಕಾಶ್ಮೀರೀ ಪ್ರತ್ಯೇಕತಾವಾದಿಗಳಿಗಿಂತಲೂ ಅಪಾಯಕಾರಿಯಾದರೂ’ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದ ರಾವತ್, “84 ವರ್ಷದ, ದೈಹಿಕವಾಗಿ ಅಶಕ್ತರಾದ ವ್ಯಕ್ತಿಯೊಬ್ಬರ ಬಗ್ಗೆ ಸರ್ಕಾರ ಹೆದರಿಕೊಂಡಿದೆ” ಎಂದಿದ್ದಾರೆ.
ಉತ್ತರ ಪ್ರದೇಶ: ಜನನ ಪ್ರಮಾಣದಲ್ಲಿ ಗಮನಾರ್ಹ ಕುಸಿತ
ಇಂಥ ವರ್ತನೆಗಳಿಂದ ಕೇಂದ್ರ ಸರ್ಕಾರವು ವೈಯಕ್ತಿಕ ಸ್ವಾತಂತ್ರ‍್ಯ ಕಸಿಯುವ ಯತ್ನಗಳನ್ನು ಮಾಡುತ್ತಿದೆ ಎಂದು ರಾವತ್ ಆಪಾದನೆ ಮಾಡಿದ್ದಾರೆ.