ಪುಷ್ಪ-2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾರೆ.
ಕಮಿಷನರ್ ಸಿವಿ ಆನಂದ್ ಥಿಯೇಟರ್ ನಲ್ಲಿ ನಡೆದ ಘಟನೆಗಳನ್ನು ತೋರಿಸುವ ವಿಡಿಯೋ ರಿಲೀಸ್ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರಿಗೆ ನೋಟಿಸ್ ನೀಡಲಾಗಿದ್ದು, ಇಂದು ವಿಚಾರಣೆ ಎದುರಿಸಿದ್ದಾರೆ.ಪುಷ್ಪ-2 ಸಿನಿಮಾ ಪ್ರದರ್ಶನಕ್ಕೆ ಮುನ್ನ ಗೇಟ್ ನಲ್ಲಿ ಒಬ್ಬರನ್ನ ಒಬ್ಬರು ತಳ್ಳುತ್ತಿರುವುದನ್ನು ನೀವು ನೋಡಬಹುದು.
ಇತ್ತೀಚೆಗೆ ತೆರೆಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಪುಷ್ಪ-2 ಚಿತ್ರ ಹಲವು ವಿವಾದಗಳಿಂದ ಸುದ್ದಿಯಾಗುತ್ತಿದೆ. ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಗೆ ನಟ ಅಲ್ಲು ಅರ್ಜುನ್ ಹಾಜರಾಗಿದ್ದಾರೆ.ವಕೀಲರ ಜೊತೆ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಬಂದ ನಟ ಅಲ್ಲು ಅರ್ಜುನ್ ಸತತ 2 ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಹಾಜರಾಗಿದ್ದಾರೆ.
Pushpa-2 Stampede Row#WATCH CCTV footage of the Sandhya theatre stampede. #AlluArjun #SandhyaTheatreIncident #Puspa2 pic.twitter.com/bonnuGEuiy
— Sanjay Jha (@JhaSanjay07) December 24, 2024