alex Certify ಬೀದಿ ಬದಿ ವ್ಯಾಪಾರಿಗಳಿಗೆ ಸಿಹಿ ಸುದ್ದಿ: ಸ್ಟಾಂಪ್ ಶುಲ್ಕ ವಿನಾಯಿತಿ ಮಸೂದೆ ಪಾಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿ ಬದಿ ವ್ಯಾಪಾರಿಗಳಿಗೆ ಸಿಹಿ ಸುದ್ದಿ: ಸ್ಟಾಂಪ್ ಶುಲ್ಕ ವಿನಾಯಿತಿ ಮಸೂದೆ ಪಾಸ್

ಬೆಳಗಾವಿ: ಬೀದಿ ಬದಿ ವ್ಯಾಪಾರಿಗಳಿಗೆ ಸ್ಟಾಂಪ್ ಶುಲ್ಕ ವಿನಾಯಿತಿ ಮಸೂದೆ ವಿಧಾನ ಪರಿಷತ್ ನಲ್ಲಿ ಪಾಸ್ ಆಗಿದೆ.

ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ಸಾಲ ಪಡೆಯುವ ಬೀದಿ ಬದಿ ವ್ಯಾಪಾರಿಗಳು ಬರೆದುಕೊಡುವ ಸಾಲ ಕರಾರು ಪತ್ರಗಳ ಮೇಲಿನ ಮುದ್ರಾಂಕ ಶುಲ್ಕಕ್ಕೆ ವಿನಾಯಿತಿ ನೀಡುವ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ.

ಕಂದಾಯ ಸಚಿವ ಆರ್. ಆಶೋಕ್ ಅವರು ವಿಧಾನ ಪರಿಷತ್ ನಲ್ಲಿ ಕರ್ನಾಟಕ ಸ್ಟಾಂಪ್ 4ನೇ ತಿದ್ದುಪಡಿ ವಿಧೇಯಕ 2022 ಮಂಡಿಸಿದ್ದು, ಕೇಂದ್ರ ಯೋಜನೆ ಅಡಿ ಸಾಲ ಪಡೆದುಕೊಳ್ಳುವ ಬೀದಿಬದಿ ವ್ಯಾಪಾರಿಗಳು ಪಡೆಯುವ ಸಾಲದ ಆಧಾರದ ಮೇಲೆ ಕರಾರು ಪತ್ರ ನೋಂದಣಿಗೆ ಮುದ್ರಾಂಕ ಶುಲ್ಕ ಪಾವತಿಸಬೇಕಿತ್ತು. ಇದನ್ನು ಮಾಫಿ ಮಾಡಲು ತಿದ್ದುಪಡಿ ವಿಜಯ ತರಲಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ವಿಧಾನ ಪರಿಷತ್ ನಲ್ಲಿ ಧ್ವನಿ ಮತದ ಮೂಲಕ ಒಪ್ಪಿಗೆ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...