alex Certify ಹಳಸಿದ ರೊಟ್ಟಿ, ಚಪಾತಿ ಔಷಧಿಗಿಂತ ಕಡಿಮೆಯಿಲ್ಲ, ಗಂಭೀರ ಕಾಯಿಲೆಗಳಿಗೂ ನೀಡುತ್ತೆ ಪರಿಹಾರ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳಸಿದ ರೊಟ್ಟಿ, ಚಪಾತಿ ಔಷಧಿಗಿಂತ ಕಡಿಮೆಯಿಲ್ಲ, ಗಂಭೀರ ಕಾಯಿಲೆಗಳಿಗೂ ನೀಡುತ್ತೆ ಪರಿಹಾರ……!

ಊಟಕ್ಕೆ ಅಥವಾ ಉಪಹಾರಕ್ಕೆ ಮಾಡಿದ ರೊಟ್ಟಿ ಹಾಗೂ ಚಪಾತಿ ಕೆಲವೊಮ್ಮೆ ಖಾಲಿಯಾಗದೇ ಉಳಿದುಬಿಡುತ್ತದೆ. ಅನೇಕರು ಅದನ್ನು ತಿನ್ನಲು ಇಷ್ಟಪಡುವುದಿಲ್ಲ. ದನ-ಕರುಗಳಿಗೆ, ನಾಯಿಗಳಿಗೆ ಕೊಡುತ್ತಾರೆ. ಇಲ್ಲವೇ ಬಿಸಾಡಿಬಿಡುತ್ತಾರೆ.

ಆದರೆ ಈ ರೀತಿ ಉಳಿದು ಹೋದ ಚಪಾತಿ ಹಾಗೂ ರೊಟ್ಟಿ ಆರೋಗ್ಯದ ನಿಧಿ ಎಂಬುದು ಅನೇಕರಿಗೆ ತಿಳಿದಿಲ್ಲ. ಈ ಚಪಾತಿ ತಿನ್ನುವುದರಿಂದ ಅನೇಕ ರೋಗಗಳನ್ನು ದೂರವಿಡಬಹುದು.

ಅಧಿಕ ರಕ್ತದೊತ್ತಡ ನಿಯಂತ್ರಣ ಉಳಿದು ಹೋದ ಚಪಾತಿ ಅಥವಾ ರೊಟ್ಟಿಯನ್ನು ತಣ್ಣನೆಯ ಹಾಲಿನೊಂದಿಗೆ ಮುಂಜಾನೆ ತಿನ್ನುವುದು ಅಧಿಕ ರಕ್ತದೊತ್ತಡ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಆರೋಗ್ಯ ತಜ್ಞರ ಪ್ರಕಾರ ಅಧಿಕ ಬಿಪಿ ಇರುವ ರೋಗಿಗಳು ಬೆಳಗ್ಗೆ ಹಾಲಿನೊಂದಿಗೆ ಈ  ರೊಟ್ಟಿಯನ್ನು ತಿನ್ನಬಹುದು. ಉಳಿದವರು ತರಕಾರಿಗಳೊಂದಿಗೆ ರೊಟ್ಟಿ ತಿನ್ನಬಹುದು.

ಸಕ್ಕರೆ ಕಾಯಿಲೆ ಇರುವವರಿಗೆ ಪ್ರಯೋಜನಕಾರಿ

ಸಕ್ಕರೆ ಕಾಯಿಲೆ ಇರುವವರು ಅದನ್ನು ನಿಯಂತ್ರಿಸಲು ಬಯಸಿದರೆ ಈ ರೀತಿ ಉಳಿದು ಹೋದ ರೊಟ್ಟಿಯನ್ನು ಸೇವಿಸಬೇಕು. ಮಧುಮೇಹ ರೋಗಿಗಳು ಖಾಲಿ ಹೊಟ್ಟೆಯಲ್ಲಿ ಹಾಲಿನೊಂದಿಗೆ ಈ ರೊಟ್ಟಿ ತಿಂದರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

ತೂಕ ಇಳಿಕೆ – ಉಳಿದು ಹೋದ ಚಪಾತಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಇದನ್ನು ಸೇವನೆ ಮಾಡುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುತ್ತದೆ. ಹಸಿವನ್ನು ನಿಯಂತ್ರಿಸುವ ಮೂಲಕ ಸ್ಥೂಲಕಾಯತೆಯನ್ನು ತಪ್ಪಿಸಬಹುದು.

ಜೀರ್ಣಕ್ರಿಯೆಗೆ ಅವಶ್ಯಕಆರೋಗ್ಯಕರ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಗೆ ಬಹಳ ಮುಖ್ಯ. ಉಳಿದು ಹೋದ ಚಪಾತಿ ಮತ್ತು ರೊಟ್ಟಿ ತಿನ್ನುವುದರಿಂದ ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾ ಹೆಚ್ಚಾಗುತ್ತದೆ. ಇದರಿಂದ ಗ್ಯಾಸ್ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ಹೊಟ್ಟೆಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ.

ಬೆಳಗಿನ ಉಪಾಹಾರಕ್ಕೆ ಉಳಿದು ಹೋದ ರೊಟ್ಟಿ

ಬೆಳಗಿನ ಉಪಾಹಾರಕ್ಕೆ ಈ ರೀತಿ ಉಳಿದು ಹೋದ ಚಪಾತಿ ಅಥವಾ ರೊಟ್ಟಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದರಿಂದ ಸಮಯವೂ ಉಳಿತಾಯವಾಗುತ್ತದೆ. ಮುಂಜಾನೆಯೇ ಕಚೇರಿಗೆ ಅಥವಾ ಕೆಲಸಕ್ಕೆ ಹೋಗುವವರು ಇದನ್ನು ಬಳಸಿಕೊಳ್ಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...