ತಾಲಿಬಾನ್ ವಶಕ್ಕೆ ಒಳಪಡುವ ಮುನ್ನ ಕಾಬೂಲ್ ನಲ್ಲಿರುವ ಬ್ರಿಟನ್ ರಾಯಭಾರ ಕಚೇರಿ ತೊರೆದ ಅಲ್ಲಿನ ಸಿಬ್ಬಂದಿ, ತಮ್ಮ ದೇಶಕ್ಕಾಗಿ ಕೆಲಸ ಮಾಡುತ್ತಿರುವ ಅಫ್ಘನ್ನರ ವಿವರಗಳಿದ್ದ ದಾಖಲೆಗಳನ್ನು ಅಲ್ಲೇ ಬಿಟ್ಟು ಬಂದಿದ್ದಾರೆ.
“ಕಾಬೂಲ್‌ನಲ್ಲಿ ಪರಿಸ್ಥಿತಿ ಹದಗೆಟ್ಟ ಕಾರಣ ಅಲ್ಲಿರುವ ನಮ್ಮ ರಾಯಭಾರ ಕಚೇರಿಯನ್ನು ಮುಚ್ಚುವ ಕೆಲಸವನ್ನು ತ್ವರಿತವಾಗಿ ಮಾಡಲಾಗಿದೆ. ಇದೇ ವೇಳೆ ಸೂಕ್ಷ್ಮ ದಾಖಲೆಗಳನ್ನು ನಾಶಪಡಿಸಲು ಸಾಧ್ಯವಿರುವ ಎಲ್ಲಾ ಯತ್ನಗಳನ್ನು ಮಾಡಲಾಗಿದೆ” ಎಂದು ಬ್ರಿಟನ್ ವಿದೇಶಾಂಗ ಕಚೇರಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಹೆಣ್ಣುಮಕ್ಕಳದ್ದೇ ತಪ್ಪು ಎನ್ನುವವರಿಗೆ ರಮ್ಯಾ ತಿರುಗೇಟು; ಇಂಥ ಅಸಂಬದ್ಧಗಳು ಕೊನೆಯಾಗಬೇಕು ಎಂದ ಸ್ಯಾಂಡಲ್ ವುಡ್ ನಟಿ
ತಾಲಿಬಾನೀ ಪಡೆಗಳಿಂದ ಗಸ್ತು ಕಾಯಲ್ಪಟ್ಟ ರಾಯಭಾರ ಕಚೇರಿಯಲ್ಲಿ, ಅಫ್ಘಾನಿಸ್ತಾನದ ಮೂರು ಸಿಬ್ಬಂದಿ ಹಾಗೂ ಅವರ ಕುಟುಂಬಗಳ ವಿವರಗಳಿದ್ದ ಪತ್ರಿಕೆಗಳು ಸಿಕ್ಕಿದ್ದು, ಎಲ್ಲವನ್ನೂ ವಿದೇಶಾಂಗ ಕಚೇರಿಗೆ ಹಸ್ತಾಂತರ ಮಾಡಿದ್ದಾಗಿ ದಿ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು.
“ಈ ಮೂರೂ ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ನಾವು ಕರೆತಂದಿದ್ದೇವೆ” ಎಂದು ವಿದೇಶಾಂಗ ಕಚೇರಿಯ ವಕ್ತಾರ ತಿಳಿಸಿದ್ದಾರೆ.