ಬೆಂಗಳೂರು: ಮುಖ್ಯಮಂತ್ರಿಗಳಿಗೆ ಒಂದು ವಾರದಿಂದ ಅಪಾಯಿಂಟ್ಮೆಂಟ್ ಕೇಳಿದ್ದೆ. ಯಶವಂತಪುರ ಕ್ಷೇತ್ರದ ಸಮಸ್ಯೆ ವಿಚಾರವಾಗಿ ಮಾತನಾಡಲು ಸಮಯ ಕೇಳಿದ್ದು, ಇಂದು ಬರಲು ಹೇಳಿದ್ದರು. ಹೀಗಾಗಿ ಮುಖ್ಯಮಂತ್ರಿಗಳನ್ನು ನಾನು ಭೇಟಿಯಾಗಿದ್ದೇನೆ. ನಮ್ಮ ಬೆಂಬಲಿಗರು ಯಾರೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ ಎಂದು ಸಿಎಂ ಭೇಟಿ ಬಳಿಕ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಜೆಡಿಎಸ್ ಪಕ್ಷದಿಂದ ಬಂದವರು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿದ್ದಾರೆ. ಯಾರಾದರೂ ಬಿಜೆಪಿಯಿಂದ ಹೋದರೆ ಆಲ್ಟರ್ನೇಟಿವ್ ಸಿಗುತ್ತಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪಕ್ಷದ ನಾಯಕರದ ಸಿ.ಟಿ. ರವಿ, ಅಶೋಕ್ ಎಲ್ಲರೂ ಮಾತನಾಡಿದ್ದಾರೆ. ಒಳ್ಳೆಯ ವಾತಾವರಣ ಸೃಷ್ಟಿಸುವಂತೆ ಮನವಿ ಮಾಡಿದ್ದೇನೆ. ಪಕ್ಷದಿಂದ ಅಮಾನತು ಮಾಡುವಂತೆ ಯಾರಿಗೂ ದೂರು ನೀಡಿಲ್ಲ. ಆದದ್ದು ಆಗಿದೆ. ವಾತಾವರಣ ತಿಳಿ ಮಾಡಿ ಎಂದು ಮನವಿ ಮಾಡಿದ್ದೆ ಎಂದು ತಿಳಿಸಿದ್ದಾರೆ.
ವಾರ್ನ್ ಮಾಡುವಂತೆ ನಾನು ನೀಡಿದ್ದರೂ ದಾಖಲಾತಿ ನೀಡಿದ್ದೆ. ನಾನು ನೀಡಿದ ದಾಖಲಾತಿ ಆಧಾರದ ಮೇಲೆ ಕ್ರಮ ಕೈಗೊಂಡಿದ್ದಾರೆ. ಅದೃಷ್ಟ ಚೆನ್ನಾಗಿತ್ತು ಗೆದ್ದೆ. ಹೆಚ್ಚು ಕಮ್ಮಿ ಆಗಿದ್ರೆ ಏನಾಗುತ್ತಿತ್ತೋ ಏನೋ? ಪಕ್ಷದ ವಿರುದ್ಧ ನನಗೆ ಅಸಮಾಧಾನ ಇಲ್ಲ. ನನ್ನ ಕ್ಷೇತ್ರದ ವಿಚಾರವಾಗಿ ಮಾತ್ರ ನನಗೆ ಅಸಮಾಧಾನ ಇದೆ ಎಂದು ಬೆಂಗಳೂರಿನಲ್ಲಿ ಸಿಎಂ ಭೇಟಿ ಬಳಿಕ ಶಾಸಕ ಸೋಮಶೇಖರ್ ಹೇಳಿದ್ದಾರೆ.