ಬೆಂಗಳೂರು: ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಅವರ ತೇಜೋವಧೆ ಆರೋಪ ಕೇಳಿ ಬಂದಿದೆ.
ಜವರಾಯಿಗೌಡ ಬಳಗ ಎಂಬ ಫೇಸ್ಬುಕ್ ಖಾತೆ ಮೂಲಕ ಸಚಿವ ಎಸ್.ಟಿ. ಸೋಮಶೇಖರ್ ಅವರ ಅವಹೇಳನ ಮಾಡಲಾಗಿದೆ. ಸೋಮಶೇಖರ್ ವಿರುದ್ಧ ತೇಜೋವಧೆ ಮಾಡಲಾಗಿದ್ದು, ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ. ಬಿಜೆಪಿ ಮುಖಂಡರು ದೂರು ಹಿನ್ನೆಲೆಯಲ್ಲಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.