ಬೆಂಗಳೂರು: ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಪದವಿಪೂರ್ವ ಕಾಲೇಜುಗಳಿಗೆ ಸೇರಲು ಅಕ್ಟೋಬರ್ 23 ರವರೆಗೆ ದಂಡ ಶುಲ್ಕವಿಲ್ಲದೆ ಅವಕಾಶ ನೀಡಲಾಗಿದೆ.
ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ದಂಡ ಶುಲ್ಕದೊಂದಿಗೆ ನವೆಂಬರ್ 9 ರ ವರೆಗೆ ಪ್ರವೇಶ ಪಡೆಯಲು ಕಾಲಾವಕಾಶ ನೀಡಲಾಗಿದೆ.
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಅಕ್ಟೋಬರ್ 23 ರವರೆಗೆ ದಂಡ ಶುಲ್ಕವಿಲ್ಲದೆ ಪ್ರವೇಶ ಪಡೆಯಬಹುದು. ಅಕ್ಟೋಬರ್ 25 ರಿಂದ 30 ರವರೆಗೆ 670 ರೂಪಾಯಿ ಮತ್ತು ನವೆಂಬರ್ 1 ರಿಂದ 9 ರವರೆಗೆ 2890 ರೂಪಾಯಿ ವಿಶೇಷ ದಂಡ ಶುಲ್ಕ ಪಾವತಿಸಿ ದಾಖಲಾತಿ ಪಡೆಯಬಹುದಾಗಿದೆ.