ಬೆಂಗಳೂರು : ನಾಳೆಯಿಂದ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಸಚಿವ ಈಶ್ವರ್ ಖಂಡ್ರೆ ಶುಭ ಹಾರೈಸಿದ್ದಾರೆ.
ಪ್ರೀತಿಯ ವಿದ್ಯಾರ್ಥಿಗಳೇ, ನಾಳೆಯಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ನಿಮ್ಮ ಶೈಕ್ಷಣಿಕ ಬದುಕಿನ ಮಹತ್ವದ ಘಟ್ಟವಾಗಿದೆ. ಇದು ನಿಮ್ಮ ಭವಿಷ್ಯಕ್ಕೆ ಬುನಾದಿ ಉಂಟುಮಾಡುವ ಒಂದು ಪ್ರಮುಖ ಹಂತ. ನೀವು ವರ್ಷಪೂರ್ತಿ ಶಾಲೆಯಲ್ಲಿ ಕಲಿತಿದ್ದೀರಿ ಮತ್ತು ಪರೀಕ್ಷೆಗೆ ಚೆನ್ನಾಗಿ ಸಿದ್ಧತೆ ಮಾಡಿಕೊಂಡಿದ್ದೀರಿ ಎಂದು ನಂಬುತ್ತೇನೆ. ಈಗ ನೀವು ಧೈರ್ಯವಾಗಿ ಮತ್ತು ಸಮರ್ಪಕವಾಗಿ ಪರೀಕ್ಷೆ ಬರೆಯಲು ಮುಂದಾಗಿದ್ದಿರಿ.
ಶ್ರದ್ಧೆಯಿಂದ ಓದಿ ಪರೀಕ್ಷೆ ಬರೆಯಿರಿ. ಆತಂಕಪಡುವ ಅಗತ್ಯವಿಲ್ಲ; ನಿರ್ಭೀತಿಯಿಂದ ಹಾಗೂ ಆತ್ಮವಿಶ್ವಾಸದೊಂದಿಗೆ ಉತ್ತರಿಸಲು ಮನಸ್ಸು ಮಾಡಿರಿ. ನಿಶ್ಚಿತವಾಗಿಯೂ ಯಶಸ್ಸು ನಿಮ್ಮದಾಗುತ್ತದೆ.
ನಿಮಗೆಲ್ಲರಿಗೂ ಶುಭವಾಗಲಿ! ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.