ಬೆಂಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಎಸ್ಎಸ್ಎಲ್ಸಿ ಮುಖ್ಯಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಮಾರ್ಚ್ 28 ರಿಂದ ಏಪ್ರಿಲ್ 11ರ ವರೆಗೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದ್ದು, ಆಕ್ಷೇಪಣೆ ಬಳಿಕ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.
ಮಾರ್ಚ್ 28 ರಂದು ಪ್ರಥಮ ಭಾಷೆ –ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ
ಮಾರ್ಚ್ 30 ದ್ವಿತೀಯ ಭಾಷೆ –ಇಂಗ್ಲಿಷ್, ಕನ್ನಡ
ಏಪ್ರಿಲ್ 1 ಕೋರ್ ಸಬ್ಜೆಕ್ಟ್
ಏಪ್ರಿಲ್ 4 ಗಣಿತ, ಸಮಾಜಶಾಸ್ತ್ರ
ಏಪ್ರಿಲ್ 6 ಸಮಾಜ ವಿಜ್ಞಾನ
ಏಪ್ರಿಲ್ 8 ತೃತೀಯ ಭಾಷೆ
ಏಪ್ರಿಲ್ 11 ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ ವಿಷಯದ ಪರೀಕ್ಷೆಗಳು ನಡೆಯಲಿವೆ.