ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಗೆ ಸರ್ಕಾರ ನಿಯಮಾವಳಿ ರೂಪಿಸಿದೆ. ಎಲ್ಲಾ ವಿಷಯಗಳಿಗೂ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಎರಡು ದಿನದಲ್ಲಿ ಎಲ್ಲಾ ಆರು ವಿಷಯಗಳಿಗೂ ಪರೀಕ್ಷೆ ನಡೆಸಲಾಗುತ್ತದೆ.
ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಪರೀಕ್ಷೆ ನಡೆಯಲಿದೆ. ಮೂರು ಭಾಷೆ ವಿಷಯಗಳಿಗೆ ಒಂದೇ ದಿನ ಪರೀಕ್ಷೆ ನಡೆಯಲಿದ್ದು, ಮೂರು ಭಾಷೆಯ ವಿಷಯಗಳಿಗೆ ತಲಾ ಒಂದು ಭಾಷೆಗೆ ಗರಿಷ್ಠ 40 ನಿಮಿಷ ಅವಧಿ ಇರಲಿದೆ. ಮೂರು ಭಾಷೆಯ ವಿಷಯಗಳಿಗೆ 120 ಅಂಕ ನಿಗದಿ ಮಾಡಲಾಗಿದೆ.
ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ 120 ಅಂಕದ ಒಂದು ಪ್ರಶ್ನೆ ಪತ್ರಿಕೆ ಇರುತ್ತದೆ. ತಲಾ ಒಂದು ವಿಷಯಕ್ಕೆ 40 ಅಂಕ ನಿಗದಿ ಮಾಡಲಾಗಿದೆ. ಆರು ವಿಷಯಗಳಿಗೆ ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ ಇರಲಿದೆ. ಎರಡು ದಿನದ ಪರೀಕ್ಷೆಯಲ್ಲಿ ನಡುವೆ ಅಂತರವಿರಲಿದೆ ಎಂದು ಹೇಳಲಾಗಿದೆ.