ಬೆಂಗಳೂರು: ಕೊರೋನಾ ಕಾರಣದಿಂದಾಗಿ ಈ ಬಾರಿ ಎಸ್ಎಸ್ಎಲ್ಸಿ ಮಕ್ಕಳಿಗೆ ಪಾಠ-ಪ್ರವಚನ ಸರಿಯಾಗಿ ನಡೆದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಆತಂಕದಲ್ಲಿದ್ದು, ಅಂತಹ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.
ಈ ಬಾರಿ ಕಷ್ಟದ ಪ್ರಶ್ನೆಗಳ ಬದಲಿಗೆ ಸುಲಭವಾದ ಮತ್ತು ನೇರ ಪ್ರಶ್ನೆಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷೆ ವಿನ್ಯಾಸ ಬದಲಿಸಿ ಸುಲಭಗೊಳಿಸಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ.
ಶೇಕಡ 40 ರಷ್ಟು ಸರಳ ಪ್ರಶ್ನೆಗಳನ್ನು ಕೇಳಲಾಗುವುದು. ಲಾಕ್ಡೌನ್ ನಿಂದಾಗಿ ಶಾಲೆಗಳು ಸರಿಯಾಗಿ ನಡೆಯದ ಕಾರಣ ಶೇಕಡ 30 ರಷ್ಟು ಪಠ್ಯ ಕಡಿತಗೊಳಿಸಿದ್ದು, ಕಠಿಣ ಪ್ರಶ್ನೆಗಳ ಸಂಖ್ಯೆಯನ್ನು ಇಳಿಕೆ ಮಾಡಲಾಗಿದೆ.
ಶೇಕಡ 5 ರಷ್ಟು ಮಾತ್ರ ಕಠಿಣ ಪ್ರಶ್ನೆಗಳು ಇರಲಿದ್ದು, ಉಳಿದಂತೆ ಶೇಕಡ 40 ರಷ್ಟು ಸರಳ ಪ್ರಶ್ನೆಗಳು ಶೇಕಡ 20 ರಷ್ಟು ಸ್ವಲ್ಪ ಕಷ್ಟಕರ ಪ್ರಶ್ನೆಗಳು ಇರಲಿವೆ. ಪ್ರಬಂಧ ಮಾದರಿ ಪ್ರಶ್ನೆಗಳ ಸಂಖ್ಯೆಯನ್ನು ಕೂಡ ಕಡಿತ ಮಾಡಲಾಗುವುದು ಎಂದು ಹೇಳಲಾಗಿದೆ.