ಬೆಂಗಳೂರು: 2023ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಪರೀಕ್ಷಾ ಶುಲ್ಕ ಪಾವತಿಸುವಂತೆ ಸೂಚನೆ ನೀಡಲಾಗಿದೆ.
ಶಾಲಾ ಲಾಗಿನ್ ನಲ್ಲಿ ಸೃಜಿಸಲಾಗುವ ಚಲನ್ ಬಳಸಿಕೊಂಡೇ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಬೇಕು. ಮಂಡಳಿಯ ಯಾವುದೇ ಇತರೆ ಚಲನ್ ಬಳಸಿ ಶುಲ್ಕ ಪಾವತಿಸಬಾರದು. ಆ ರೀತಿ ಪಾವತಿಯಾದಂತಹ ಚಲನ್ ಪರಿಗಣಿಸುವುದಿಲ್ಲ.
ಒಮ್ಮೆ ಚಲನ್ ಡೌನ್ಲೋಡ್ ಮಾಡಿಕೊಂಡ ನಂತರ ವಿದ್ಯಾರ್ಥಿಗಳ ಮಾಹಿತಿ ಅಪ್ಡೇಟ್ ಮಾಡಲು ಅವಕಾಶ ಇರುವುದಿಲ್ಲ. ಹಾಗಾಗಿ ಯಾವುದೇ ಸೇರ್ಪಡೆ, ಅಪ್ಡೇಷನ್, ಡಿಲೀಟ್ ಮಾಡಬೇಕಾದಲ್ಲಿ ಅದನ್ನು ಮಾಡಿದ ನಂತರವೇ ಚಲನ್ ಡೌನ್ಲೋಡ್ ಮಾಡಿಕೊಳ್ಳಬೇಕಿದೆ ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ಚಲನ್ ಮುದ್ರಿಸಿಕೊಳ್ಳಲು ಡಿಸೆಂಬರ್ 27ರವರೆಗೆ ಅವಕಾಶ ನೀಡಿದ್ದು, ಡಿಸೆಂಬರ್ 29 ರೊಳಗೆ ಶುಲ್ಕ ಬ್ಯಾಂಕ್ ಗೆ ಜಮಾ ಮಾಡಲು ತಿಳಿಸಲಾಗಿದೆ. ಪುನರಾವರ್ತಿತ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ ಹಳೆ ಪದ್ದತಿಯಂತೆ ಬ್ಯಾಂಕ್ ಗಳಲ್ಲಿ ಪಾವತಿಸಲು ಡಿಸೆಂಬರ್ 29 ಕೊನೆಯ ದಿನವಾಗಿದೆ.