
ಬೆಂಗಳೂರು: ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್ 27 ರಿಂದ ಮರು ಪರೀಕ್ಷೆ ನಡೆಸಲಾಗುತ್ತದೆ.
ಪ್ರಸ್ತುತ ಪ್ರಕಟವಾಗಿರುವ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಜೂನ್ 27 ರಿಂದ ಜುಲೈ 4 ರವರೆಗೆ ಪೂರಕ ಪರೀಕ್ಷೆ ಬರೆಯಬಹುದಾಗಿದೆ. ಮೇ 20 ರಿಂದ 30 ರವರೆಗೆ ಪೂರಕ ಪರೀಕ್ಷೆ ನೊಂದಾಯಿಸಿಕೊಳ್ಳಲು ಅವಕಾಶ ಇದೆ.
ಒಂದು ವಿಷಯಕ್ಕೆ 370 ರೂಪಾಯಿ, ಎರಡು ವಿಷಯಕ್ಕೆ 461 ರೂಪಾಯಿ, ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ 620 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಪೂರಕ ಪರೀಕ್ಷೆ ಕುರಿತಾದ ಮಾಹಿತಿಗೆ 080 23310075/76 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಜೂನ್ 27 ವಿಜ್ಞಾನ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ
ಜೂನ್ 28 ಪ್ರಥಮ ಭಾಷೆ
ಜೂನ್ 29 ದ್ವಿತೀಯ ಭಾಷೆ
ಜೂನ್ 30 ಸಮಾಜ-ವಿಜ್ಞಾನ
ಜುಲೈ1 ತೃತೀಯ ಭಾಷೆ
ಜುಲೈ 4 ಗಣಿತ ವಿಷಯದ ಪರೀಕ್ಷೆಗಳು ನಡೆಯಲಿವೆ.