
ಬೆಂಗಳೂರು: ಮೇ 4 ರವರೆಗೆ ಎಸ್ಎಸ್ಎಲ್ಸಿ ತರಗತಿಗಳನ್ನು ಬಂದ್ ಮಾಡಲಾಗುವುದು. ಶಿಕ್ಷಣ ಇಲಾಖೆ ಆದೇಶದ ಮೇರೆಗೆ ಎಸ್ಎಸ್ಎಲ್ಸಿ ತರಗತಿಗಳನ್ನು ಬಂದ್ ಮಾಡಲಾಗುವುದು.
ಏಪ್ರಿಲ್ 24 ರೊಳಗೆ ಮೌಲ್ಯಾಂಕನ ಫಲಿತಾಂಶ ನೀಡಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಏಪ್ರಿಲ್ 27 ರಿಂದ ಮೇ 4 ವರೆಗೆ ಶಿಕ್ಷಕರಿಗೆ ಶಾಲೆಯ ಹಾಜರಾತಿಗೆ ವಿನಾಯಿತಿ ನೀಡಲಾಗಿದೆ. ಈ ಅವಧಿಯಲ್ಲಿ ಆನ್ಲೈನ್ ಕ್ಲಾಸ್ ನಡೆಸುವಂತೆ ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.