ಬೆಂಗಳೂರು : ಕೊರೊನಾ ಸಂಕಷ್ಟ ಕಾಲದಲ್ಲಿಯೇ ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಲಾಗಿದೆ. ಕೊರೊನಾ ನಿಯಮ ಅನುಸರಿಸುತ್ತಿರುವುದರಿಂದಾಗಿ ಖರ್ಚು ಹೆಚ್ಚಾಗುವುದನ್ನು ತಡೆಯಲು ಸರ್ಕಾರ ವಿದ್ಯಾರ್ಥಿಗಳ ಮೇಲೆ ಹೊರೆ ಹಾಕುತ್ತಿದೆ ಎನ್ನಲಾಗುತ್ತಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕವನ್ನು 100 ರೂ.ನಷ್ಟು ಹೆಚ್ಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಹೀಗಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ 485 ರೂ.ನಿಂದ 585 ರೂಗೆ ಏರಿಕೆಯಾಗಿದೆ. ಅಲ್ಲದೇ, ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಒಂದು ವಿಷಯಕ್ಕೆ ಕಟ್ಟಬೇಕಿದ್ದ ಶುಲ್ಕವನ್ನು 320ರೂ.ನಿಂದ 370ರೂ. ಗೆ ಹೆಚ್ಚಳ ಮಾಡಲಾಗಿದೆ.
3 ವಿಷಯಗಳಿಗೆ ಪರೀಕ್ಷೆ ಕಟ್ಟಬೇಕಿದ್ದ ವಿದ್ಯಾರ್ಥಿಗಳು 520 ರೂ. ಗೆ ಬದಲಾಗಿ 620ರೂ. ಕಟ್ಟಬೇಕಾಗಿದೆ. 2 ವಿಷಯಗಳಿಗೆ 386 ರೂ.ಗೆ ಬದಲಾಗಿ 461 ರೂ. ಕಟ್ಟಬೇಕಿದೆ. ಡಿ. 15ರಿಂದ ವಿದ್ಯಾರ್ಥಿಗಳ ನೋಂದಣಿ ಕಾರ್ಯ ಆರಂಭವಾಗಲಿದೆ.
ಸಿ ಬಿ ಎಸ್ ಇ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ನೋಂದಣಿ ಕಾರ್ಯ ಡಿಸೆಂಬರ್ 15ರಿಂದ ಆರಂಭವಾಗಲಿದೆ.