ಈ ಬಾರಿಯ 10ನೇ ತರಗತಿ ಪರೀಕ್ಷೆ ಈಗಾಗಲೇ ಆರಂಭವಾಗಿದ್ದು, ಸುಸೂತ್ರವಾಗಿ ನಡೆಯುತ್ತಿದೆ. ಇದರ ಮಧ್ಯೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.
10ನೇ ತರಗತಿ ಪರೀಕ್ಷೆ ಫಲಿತಾಂಶ ಹೆಚ್ಚಿಸುವ ಸಲುವಾಗಿ ಭಾಷಾ ವಿಷಯ ಹಾಗೂ ಐಚ್ಚಿಕ ವಿಷಯಗಳಿಗೆ ಕೃಪಾಂಕ ನೀಡಲು ತೀರ್ಮಾನಿಸಲಾಗಿದೆ.
ಭಾಷಾ ವಿಷಯಗಳಿಗೆ ಶೇಕಡ 10 ಹಾಗೂ ಐಚ್ಛಿಕ ವಿಷಯಗಳಿಗೆ ಶೇಕಡಾ 8 ರಷ್ಟು ಕೃಪಾಂಕ ನೀಡಲು ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ.