10ನೇ ತರಗತಿ ಪೂರ್ವಸಿದ್ಧತಾ ಪರೀಕ್ಷಾ ಶುಲ್ಕವನ್ನು ಈ ಹಿಂದೆ ಅರವತ್ತು ರೂಪಾಯಿಗಳಿಗೆ ನಿಗದಿಪಡಿಸಲಾಗಿದ್ದು, ಈ ಕುರಿತಂತೆ ಈಗ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಪರೀಕ್ಷಾ ಶುಲ್ಕದಲ್ಲಿ ಹತ್ತು ರೂಪಾಯಿ ಕಡಿಮೆ ಮಾಡಲಾಗಿದ್ದು, ಪ್ರತಿ ವಿದ್ಯಾರ್ಥಿಯಿಂದ 50 ರೂಪಾಯಿಗಳನ್ನು ಸಂಗ್ರಹಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮರು ಆದೇಶ ಹೊರಡಿಸಿದೆ.
ಫೆಬ್ರುವರಿ 23 ರಿಂದ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯಲಿದ್ದು ಮಾರ್ಚ್ 1 ಕ್ಕೆ ಮುಗಿಯಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಬಿಇಒ ಗಳ ಲಾಗಿನ್ ಗೆ ಕಳುಹಿಸಿಕೊಡುತ್ತಲಾಗುತ್ತದೆ.