ಸಿಬ್ಬಂದಿ ನೇಮಕಾತಿ ಆಯೋಗವು 2021ನೇ ಸಾಲಿನ 9ನೇ ಹಂತದ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಹಾಗೂ ಈ ಸಂಬಂಧ ಅಧಿಸೂಚನೆಯನ್ನು ನೀಡಿದೆ. ಆಸಕ್ತ ಅಭ್ಯರ್ಥಿಗಳು ಎಸ್ಎಸ್ಸಿ ಅಧಿಕೃತ ವೆಬ್ಸೈಟ್ https://ssc.nic.in/ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 25ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 3261 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಶುಲ್ಕ : ಅಭ್ಯರ್ಥಿಗಳು 100 ರೂಪಾಯಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಅಥವಾ ಬಿಹೆಚ್ಐಎಂ ಯುಪಿಐ ಅಥವಾ ಎಸ್ಬಿಐ ಚಲನ್ ಮೂಲಕ ತುಂಬಬಹುದಾಗಿದೆ. ಮಹಿಳಾ ಅಭ್ಯರ್ಥಿಗಳು, ಎಸ್ಟಿ, ದಿವ್ಯಾಂಗರು. ಎಸ್ಸಿ, ನಿವೃತ್ತ ಯೋಧರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಹತಾ ಮಾನದಂಡ : ಈ ಹುದ್ದೆಗೆ ಅರ್ಜಿ ಸಲ್ಲಿಸುವವರು 10, 12 ಅಥವಾ ಪದವಿ ಉತ್ತೀರ್ಣರಾಗಿರಬೇಕು. ಈ ಬಗ್ಗೆ ವೆಬ್ಸೈಟ್ನಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.