ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಕೇಂದ್ರೀಯ ಕೈಗಾರಿಕಾ ಸುರಕ್ಷತಾ ಪಡೆ (ಸಿಐಎಸ್‌ಎಫ್) ಸೇರಿದಂತೆ ಸಶಸ್ತ್ರ ಸೇನಾಪಡೆಗಳು ಮತ್ತು ಅರೆಸೈನಿಕ ಪಡೆಗಳ ವಿವಿಧ ವಿಭಾಗಗಳಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸಲು 2021ನೇ ಸಾಲಿನಲ್ಲಿ ಒಟ್ಟಾರೆ 25,271 ಮಂದಿಯನ್ನು ನೇಮಕ ಮಾಡಲಾಗುತ್ತಿದೆ. ಖಾಲಿಯಿರುವ ಇಷ್ಟೊಂದು ಸೀಟುಗಳಿಗೆ ನ. 16 ರಿಂದ ಡಿ. 15ರವರೆಗೆ ಪರೀಕ್ಷೆ ನಡೆಯಲಿದೆ.
ರೈಲಿನಲ್ಲಿ ಸಿಕ್ಕ 2 ಲಕ್ಷ ರೂ. ಮೌಲ್ಯದ ಲ್ಯಾಪ್ ಟಾಪ್ ಮರಳಿಸಿ ಕರ್ತವ್ಯನಿಷ್ಟೆ ಮೆರೆದ ನೌಕರ
ಈ ಸಂಬಂಧ ಜು.17 ರಿಂದ ಆ.31 ರ ವರೆಗೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಆ ಪೈಕಿ ಸರಿಯಾದ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅಗತ್ಯವಾದ ಅಡ್ಮಿಷನ್ ಕಾರ್ಡ್ ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ. ಅಂದರೆ ಪರೀಕ್ಷೆಗಿಂತ ಕನಿಷ್ಠ ಎರಡು ವಾರಗಳ ಮುನ್ನ ಅಡ್ಮಿಷನ್ ಕಾರ್ಡ್ ಬಿಡುಗಡೆ ಆಗಲಿದೆ.
ಎಸ್‌ಎಸ್‌ಸಿ-ಜಿಡಿ ಪೇದೆ ಹುದ್ದೆಗೆ ಅರ್ಜಿ ಸಲ್ಲಿಸಿದವರು ತಮ್ಮ ಅಡ್ಮಿಷನ್ ಕಾರ್ಡ್ ಪಡೆಯಲು’ https://crpf.gov.in/ ‘ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ಪಂಜಾಬ್ ಸಿಎಂ ಪುತ್ರನ ವಿವಾಹ ಮಹೋತ್ಸವ: ಕಾಂಗ್ರೆಸ್ ಗಣ್ಯರು ಭಾಗಿ, ನವಜೋತ್ ಸಿಂಗ್ ಸಿಧು ಗೈರು
ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರವೇ ಪರೀಕ್ಷೆ ನಡೆಸಲಾಗುವುದು. ಪ್ರಿಲಿಮ್ಸ್ ಪರೀಕ್ಷೆಯು 100 ಅಂಕಗಳಿಗೆ ನಡೆಯಲಿದೆ. ತಪ್ಪು ಉತ್ತರಕ್ಕೆ 0.25 ಅಂಕ ನೆಗೆಟಿವ್ ಮಾರ್ಕಿಂಗ್ ಕೂಡ ಇರಲಿದೆ. ಇದರಲ್ಲಿ ಆಯ್ಕೆಯಾದವರು ಮೇನ್ಸ್ ಹಾಗೂ ಪರ್ಸನಾಲಿಟಿ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ.