alex Certify PHOTO: ಪ್ರಧಾನಿ ಮೋದಿ ಪದಗ್ರಹಣದಲ್ಲಿ ಶಾರುಖ್ – ಅಂಬಾನಿ ಕೈಯಲ್ಲಿದ್ದ ಆ ‘ಡ್ರಿಂಕ್ಸ್’ ಮೇಲೆ ಬಿತ್ತು ನೆಟ್ಟಿಗರ ಕಣ್ಣು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

PHOTO: ಪ್ರಧಾನಿ ಮೋದಿ ಪದಗ್ರಹಣದಲ್ಲಿ ಶಾರುಖ್ – ಅಂಬಾನಿ ಕೈಯಲ್ಲಿದ್ದ ಆ ‘ಡ್ರಿಂಕ್ಸ್’ ಮೇಲೆ ಬಿತ್ತು ನೆಟ್ಟಿಗರ ಕಣ್ಣು…!

SRK, Mukesh Ambani sip Rs 31 ORS packs at PM's swearing-in. Internet is amused

ರಾಷ್ಟ್ರಪತಿ ಭವನದಲ್ಲಿ ಜೂನ್ 9 ರಂದು ನಡೆದ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಇಬ್ಬರೂ ಅಕ್ಕಪಕ್ಕ ಕುಳಿತು ಮಾತುಕತೆ ವೇಳೆ ಅವರ ಕೈಯಲ್ಲಿದ್ದ ಓ ಆರ್ ಎಸ್ ಟೆಟ್ರಾ ಪ್ಯಾಕ್ ಗಮನ ಸೆಳೆದಿದೆ.

ಪ್ರಧಾನಿ ಪ್ರಮಾಣ ವಚನ ಸಮಾರಂಭದಲ್ಲಿ ಶಾರುಖ್ ಖಾನ್ ಮತ್ತು ಮುಖೇಶ್ ಅಂಬಾನಿ, 31 ರೂಪಾಯಿ ಮೌಲ್ಯದ ಒಆರ್‌ಎಸ್ ಕುಡಿಯುವುದನ್ನು ಗಮನಿಸಿದ ಜನ ಇಂಟರ್ನೆಟ್‌ನಲ್ಲಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಇವರು ಕೂಡ ಓ ಆರ್ ಎಸ್ ಕುಡಿಯುತ್ತಾರೆಯೇ? ಅಂಬಾನಿ ಜಿ ORS ಕುಡಿಯುತ್ತಿದ್ದಾರೆ ಎಂದಿದ್ದಾರೆ. ಈ ಓಆರ್‌ಎಸ್ ಕುಡಿಯಲು ನಾನು ಶ್ರೀಮಂತನಾಗಲು ಬಯಸುತ್ತೇನೆ ಎಂದು ತಮಾಷೆ ಮಾಡಿದ್ದಾರೆ.

ಮತ್ತೊಬ್ಬರು, ಬೇಸಿಗೆಯ ಬಿಸಿಲು ಮತ್ತು ಸೆಖೆ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಮಾನಿಯೊಬ್ಬರು ಈ ಹಿಂದೆ ಶಾರುಖ್ ಖಾನ್ ಗೆ ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಬಾಲಿವುಡ್ ಬಾದ್ ಶಾನ ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಶಾರುಖ್ ಖಾನ್ “ದಯವಿಟ್ಟು ಬೇಸಿಗೆಯಲ್ಲಿ ಸ್ವಲ್ಪ ನಿಂಬು ಪಾನಿ ಸೇವಿಸಿ. ನಿರ್ಜಲೀಕರಣಗೊಳ್ಳಬೇಡಿ” ಎಂದಿದ್ದರು.

ಮುಖೇಶ್ ಅಂಬಾನಿ ಮತ್ತು ಶಾರುಖ್ ಖಾನ್ ಓ ಆರ್ ಎಸ್ ಕುಡಿಯುತ್ತಿರುವ ಫೋಟೋಗಳು ವೈರಲ್ ಆಗ್ತಿದ್ದು ನೆಟ್ಟಿಗರು ತಮಾಷೆ ಮಾಡುತ್ತಾ ಪ್ರತಿಕ್ರಿಯಿಸಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...