ಗದಗ: ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತವಾಗಿ ಬಸ್ ಪಾಸ್ ನೀಡಲಾಗುತ್ತದೆ. KSRTC ಯಾವುದೇ ಆಸ್ತಿಯನ್ನು ಅಡಮಾನವಾಗಿ ಇಟ್ಟಿಲ್ಲ. ಬೆಂಗಳೂರು ಶಾಂತಿನಗರ ಕಾಂಪ್ಲೆಕ್ಸ್ ಅಡಮಾನ ಇಡಲಾಗಿದೆ. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹುಬ್ಬಳ್ಳಿಯ 16 ಎಕರೆ, ಕಲ್ಯಾಣ ಕರ್ನಾಟಕದಲ್ಲಿ ಜಮೀನು ಅಡಮಾನ ಇಡಲಾಗಿದೆ. ಸಂಸ್ಥೆಯ ಜಾಗ ಅಡಮಾನವಿಟ್ಟು ಪಡೆದ ಹಣ ಭವಿಷ್ಯ ನಿಧಿಗೆ ನೀಡಲಾಗಿದೆ. ಕಡಿಮೆ ದರದಲ್ಲಿ ಬಡ್ಡಿ ಇದ್ದಿದ್ದರಿಂದ ಅಡಮಾನ ಇಡಲಾಗಿದೆ. ಸಿಬ್ಬಂದಿಯ ಒಂದೂವರೆ ತಿಂಗಳ ವೇತನ ಮಾತ್ರ ಬಾಕಿ ಇದೆ. ಮುಂದಿನ ತಿಂಗಳಿನಿಂದ ಸಿಬ್ಬಂದಿಗೆ ನಿರಂತರವಾಗಿ ವೇತನ ನೀಡಲಾಗುತ್ತದೆ ಎಂದು ಗದಗದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.