![I feel I'm back to school after a long vacation: Srinidhi Shetty on joining set of KGF Chapter 2- The New Indian Express](https://images.newindianexpress.com/uploads/user/imagelibrary/2020/9/3/w900X450/A_golden.jpg?w=400&dpr=2.6)
ನಟಿ ಶ್ರೀನಿಧಿ ಶೆಟ್ಟಿ ಇಂದು 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2018ರಲ್ಲಿ ತೆರೆ ಕಂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆಜಿಎಫ್’ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ಶ್ರೀನಿಧಿ ಶೆಟ್ಟಿ ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡರು.
ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಅವರನ್ನು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋದ ಚಿತ್ರ ಇದಾಗಿದ್ದು, ಬೇರೆ ಬೇರೆ ಚಿತ್ರರಂಗದವರು ತಿರುಗಿ ನೋಡುವಂತೆ ಮಾಡಿದ ಈ ಕೀರ್ತಿ ಪ್ರಶಾಂತ್ ನೀಲ್ ಅವರಿಗೆ ಸೇರುತ್ತದೆ.
ಮತ್ತೊಮ್ಮೆ ಕೆಜಿಎಫ್ ನ ಮುಂದಿನ ಭಾಗದಲ್ಲಿ ಶ್ರೀನಿಧಿ ಶೆಟ್ಟಿ ತೆರೆ ಹಂಚಿಕೊಂಡರು. 2022 ರಲ್ಲಿ ರಿಲೀಸ್ ಆದ ಕೆಜಿಎಫ್ ಚಾಪ್ಟರ್ 2 ಮತ್ತೊಂದು ದಾಖಲೆ ಬರೆಯಿತು.
ಕಳೆದ ವರ್ಷ ತಮಿಳಿನ ‘ಕೋಬ್ರಾ’ ಸಿನಿಮಾದಲ್ಲಿ ಅಭಿನಯಿಸಿದ್ದ ಶ್ರೀನಿಧಿ ಶೆಟ್ಟಿ ಇತ್ತೀಚೆಗೆ ‘ತೆಲುಸು ಕದ’ ಎಂಬ ತೆಲುಗು ಸಿನಿಮಾದ ಶೂಟಿಂಗ್ ನಲ್ಲಿದ್ದಾರೆ. ಸ್ಯಾಂಡಲ್ ವುಡ್ನ ಸಿನಿತಾರೆಯರು ಇಂದು ಶ್ರೀನಿಧಿ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.