ಅವಳಿ ಮಕ್ಕಳು ಜನಿಸುವುದೇ ಅಪರೂಪವಾದ ಕಾಲದಲ್ಲಿ ಆನೆಯೊಂದು ಎರಡು ಅವಳಿ ಗಂಡು ಮರಿಗಳಿಗೆ ಜನ್ಮ ನೀಡಿದ ಅಪರೂಪದಲ್ಲಿ ಅಪರೂಪದ ಘಟನೆ ಶ್ರೀಲಂಕಾದಲ್ಲಿ ಬೆಳಕಿಗೆ ಬಂದಿದೆ. ಶ್ರೀಲಂಕಾದ ಅತ್ಯಂತ ಪ್ರಮುಖವಾದ ಅನಾಥ ಅಥವಾ ಮಾಲೀಕರಿಲ್ಲದ ಆನೆ ಬಿಡಾರ ‘ಪಿನ್ನಾವಲ’ದಲ್ಲಿ ಸುರಂಗಿ ಎಂಬ ಹೆಣ್ಣಾನೆಯು ಅವಳಿ ಮರಿಗಳಿಗೆ ಜನ್ಮ ನೀಡಿದೆ. 1975 ರಿಂದಲೂ ನಡೆಯುತ್ತಿರುವ ಈ ಆನೆ ಬಿಡಾರದಲ್ಲಿ ಮೊದಲ ಬಾರಿಗೆ ಇಂಥ ಅಪರೂಪದ ಮರಿಗಳ ಜನನವಾಗಿದೆ. ಎರಡೂ ಮರಿಗಳು ಗಾತ್ರದಲ್ಲಿ ಸ್ವಲ್ಪ ಸಣ್ಣಗಿದ್ದರೂ, ಬಹಳ ಆರೋಗ್ಯವಾಗಿವೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ; ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಉಡಾಫೆ ಉತ್ತರ
ತಾಯಿ ಆನೆ ಕೂಡ ಆರೋಗ್ಯವಾಗಿದೆ ಎಂದು ಬಿಡಾರದ ಮುಖ್ಯಸ್ಥೆ ರೇಣುಕಾ ಬಂಡಾರನಾಯ್ಕೆ ತಿಳಿಸಿದ್ದಾರೆ. 2009ರಲ್ಲಿ ಒಂದು ಗಂಡು ಆನೆಗೆ ಜನ್ಮ ನೀಡಿದ ಬಳಿಕ ಎರಡನೇ ಬಾರಿ ಸುರಂಗಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿರುವುದು ವಿಶೇಷ. ಒಟ್ಟು 81 ಆನೆಗಳು ಈ ಬಿಡಾರದಲ್ಲಿವೆ.
ಸುರಕ್ಷಿತ ಬಿಡಾರವೊಂದರಲ್ಲಿ ಅವಳಿ ಮರಿಗಳು ಜನಿಸಿರುವುದು ಶ್ರೀಲಂಕಾದ 80 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿ ಎನ್ನಲಾಗಿದೆ.