ಭಾರತ ಹಾಗೂ ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧದ ಹೊಸ ಅಧ್ಯಾಯವೊಂದರಲ್ಲಿ, ದ್ವೀಪ ದೇಶದ ರಾಜಧಾನಿ ಕೊಲಂಬೋದಿಂದ ಜಾಫ್ನಾಗೆ ಐಷಾರಾಮಿ ರೈಲು ಸೇವೆಯನ್ನು ಆರಂಭಿಸಲು ದೆಹಲಿ ನೆರವಾಗಿದೆ.
ಭಾರತದ ಸಾಲದ ನೆರವಿನಿಂದ ಆರಂಭಿಸಿರುವ ಈ ರೈಲು ಸೇವೆ ತಮಿಳರು ಹೆಚ್ಚಿರುವ ಜಾಫ್ನಾ ಜಿಲ್ಲೆಯನ್ನು ರಾಜಧಾನಿ ಕೊಲಂಬೋಗೆ ಸಂಪರ್ಕಿಸಲಿದೆ. ಅಂತರ-ನಗರಿ ರೈಲು ಸೇವೆಯು ಐಷಾರಾಮಿ ಸೌಲಭ್ಯಗಳನ್ನು ಹೊಂದಿದ್ದು, ಭಾರತದ ಎಸಿ ಡೀಸೆಲ್ ಎಂಯುನಿಂದ ಚಾಲಿತವಾಗಿದೆ.
ಕರಿಬೇವಿನ ಸೊಪ್ಪಿನಿಂದ ಇವೆ ಇಷ್ಟೆಲ್ಲಾ ಪ್ರಯೋಜನಗಳು
ಕೊಲಂಬೋದ ಮೌಂಟ್ ಲಾವಿನಿಯಾ ನಿಲ್ದಾಣದಿಂದ ಉತ್ತರದ ಜಾಫ್ನಾದ ಕಂಕೇಸಂತುರಾಯ್ ಬಂದರು ಉಪನಗರದವರೆಗೂ, 386 ಕಿಮೀಗಳನ್ನು ರೈಲು ಕ್ರಮಿಸಲಿದೆ.
“ರೈಲ್ವೇ ಮೂಲ ಸೌಕರ್ಯವನ್ನು ಮುಂದೆ ಕೊಂಡೊಯ್ಯಲು ಬಲ ತುಂಬುತ್ತಿದ್ದೇವೆ ! ಉತ್ತರ ಪ್ರಾಂತ್ಯಕ್ಕೆ ಇಂದು ಆರಂಭಿಸಲಾದ ರೈಲು ಸೇವೆಯು ಶ್ರೀಲಂಕಾದಲ್ಲಿ ಭಾರತ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯವಾದ ಎರಡು ಸ್ತಂಭಗಳಲ್ಲಿ ಒಂದಾಗಿದೆ — ಮೂಲ ಸೌಕರ್ಯ ಅಭಿವೃದ್ಧಿ ಮತ್ತು ದೇಶಾದ್ಯಂತ ಗಮನ,” ಎಂದು ಭಾರತೀಯ ರಾಯಭಾರ ಟ್ವಿಟರ್‌ನಲ್ಲಿ ತಿಳಿಸಿದೆ.
ರೈಲಿನಲ್ಲಿ ಮೊದಲ ಸಂಚಾರ ಮಾಡುವ ಮೂಲಕ ಶ್ರೀಲಂಕಾದ ಸಾರಿಗೆ ಸಚಿವ ಪವಿತ್ರಾ ವನ್ನಿರಾಚ್ಚಿ ಸೇವೆಗೆ ಚಾಲನೆ ನೀಡಿದ್ದು, ಇದೇ ವೇಳೆ, ಕೊಲಂಬೋ ಫೋರ್ಟ್ ನಿಲ್ದಾಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾರತದ ಉಪ ರಾಯಭಾರಿ ವಿನೋದ್ ಕೆ ಜೇಕಬ್ ಉಪಸ್ಥಿತರಿದ್ದರು.