ನವದೆಹಲಿ: ಕೊರೊನಾ ವಿರುದ್ಧ ರಷ್ಯಾದ ಸಿಂಗಲ್ ಡೋಸ್ ಲಸಿಕೆ ‘ಸ್ಪುಟ್ನಿಕ್ ವಿ ಲೈಟ್’ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ರಷ್ಯಾ ನೇರ ಹೂಡಿಕೆ ನಿಧಿ ಸಿಇಒ ಕಿರಿಲ್ ಡಿಮಿಟ್ರಿವ್ ಶುಕ್ರವಾರ ತಿಳಿಸಿದ್ದಾರೆ.
‘ಸ್ಪುಟ್ನಿಕ್ ವಿ’ ಕೋವಿಡ್ ಲಸಿಕೆ ಮೊದಲ ಪ್ರಮಾಣವನ್ನು ಭಾರತದಲ್ಲಿಯೂ ನೀಡಲಾಗುತ್ತಿದೆ. ಇದು ದೇಶದ ಮೂರನೇ ಕೊರೋನಾ ಲಸಿಕೆಯಾಗಿದೆ. ಇದನ್ನು ಈಗ ಇನಾಕ್ಯುಲೇಷನ್ ಡ್ರೈವ್‌ಗೆ ಬಳಸಲಾಗುತ್ತದೆ.
ಸ್ಪುಟ್ನಿಕ್ ವಿ ರಷ್ಯಾ -ಭಾರತೀಯ ಲಸಿಕೆಯಾಗಿದ್ದು, ಇದರ ಉತ್ಪಾದನೆಯ ಬಹುಪಾಲು ಭಾಗ ಭಾರತದಲ್ಲಿದೆ. ಈ ವರ್ಷ ಭಾರತದಲ್ಲಿ 850 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣದ ಸ್ಪುಟ್ನಿಕ್ ವಿ ಉತ್ಪಾದಿಸುವ ನಿರೀಕ್ಷೆಯಿದೆ. ಶೀಘ್ರದಲ್ಲೇ ಭಾರತದಲ್ಲಿ ಸ್ಪುಟ್ನಿಕ್ ವಿ ಲೈಟ್ ಪರಿಚಯವಾಗಲಿದೆ ಎಂದು ರಷ್ಯಾದ ನೇರ ಹೂಡಿಕೆ ನಿಧಿಯ ಸಿಇಒ ಕಿರಿಲ್ ಡಿಮಿಟ್ರಿವ್ ಹೇಳಿದ್ದಾರೆ.
ಕೊರೋನಾ ವಿರುದ್ಧದ ಮೊದಲ ನೋಂದಾಯಿತ ಲಸಿಕೆಯಾಗಿರುವ ಸ್ಪುಟ್ನಿಕ್ ವಿ ಲಸಿಕೆ ಯನ್ನು 5 ಡಿಸೆಂಬರ್, 2020 ರಿಂದ 15 ಏಪ್ರಿಲ್, 2021 ರ ನಡುವೆ ರಷ್ಯಾದ ಸಾಮೂಹಿಕ ವ್ಯಾಕ್ಸಿನೇಷನ್ ಕಾರ್ಯಕ್ರಮದ ಭಾಗವಾಗಿ ನೀಡಿದ್ದು, 28 ದಿನಗಳ ನಂತರ ವಿಶ್ಲೇಷಿಸಿದ ಮಾಹಿತಿಯ ಪ್ರಕಾರ, ‘ಸ್ಪುಟ್ನಿಕ್ ವಿ ಲೈಟ್’ ಲಸಿಕೆ ಶೇಕಡ 79.4 ರಷ್ಟು ಪರಿಣಾಮಕಾರಿತ್ವ ತೋರಿಸಿದೆ.
ಎರಡು-ಡೋಸ್ ಲಸಿಕೆಗಳಿಗಿಂತ ಇದರ ಪರಿಣಾಮಕಾರಿತ್ವದ ಮಟ್ಟ ಸುಮಾರು ಶೇಕಡ 80 ರಷ್ಟು ಹೆಚ್ಚಾಗಿದೆ.
ಪ್ರಯೋಗಾಲಯ ಪರೀಕ್ಷೆಗಳ ಸಮಯದಲ್ಲಿ ರಷ್ಯಾದ ಗಮಾಲೇಯ ಕೇಂದ್ರವು ಮಾಹಿತಿ ನೀಡಿದಂತೆ ಸ್ಪುಟ್ನಿಕ್ ವಿ ಲೈಟ್ ಕರೋನವೈರಸ್ ನ ಎಲ್ಲಾ ಹೊಸ ತಳಿಗಳ ವಿರುದ್ಧ ಪರಿಣಾಮಕಾರಿ ಎನ್ನುವುದು ಸಾಬೀತಾಗಿದೆ.
ಸ್ಪುಟ್ನಿಕ್ ಲೈಟ್ ಲಸಿಕೆಯ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಅಧ್ಯಯನದ ಹಂತ I / II ಪ್ರಕಾರ:
ಸ್ಪುಟ್ನಿಕ್ ಲೈಟ್ ಚುಚ್ಚುಮದ್ದು ನೀಡಿದ ನಂತರದಲ್ಲಿ 28 ನೇ ದಿನದಂದು ವ್ಯಕ್ತಿಗಳಲ್ಲಿ ಶೇಕಡ 96.9 ರಷ್ಟು ಆಂಟಿಜೆನ್ ಪ್ರತಿಕಾಯಗಳ ಬೆಳವಣಿಗೆಯನ್ನು ಹೊರಹೊಮ್ಮಿಸಬಹುದಾಗಿದೆ.
ಸ್ಪುಟ್ನಿಕ್ ಲೈಟ್ ಲಸಿಕೆ 28 ನೇ ದಿನದ ನಂತರದ ರೋಗನಿರೋಧಕತೆಯ ಮೇಲೆ ಶೇಕಡ 91.67 ವ್ಯಕ್ತಿಗಳಲ್ಲಿ ವೈರಸ್ ತಟಸ್ಥಗೊಳಿಸುವ ಪ್ರತಿಕಾಯಗಳ ಬೆಳವಣಿಗೆಯನ್ನು ಹೊರಹೊಮ್ಮಿಸುತ್ತದೆ.
SARS-CoV-2 ನ S ಪ್ರೋಟೀನ್ ವಿರುದ್ಧ ಸೆಲ್ಯುಲಾರ್ ರೋಗನಿರೋಧಕ ಪ್ರತಿಕ್ರಿಯೆ ಸ್ವಯಂಸೇವಕರಲ್ಲಿ 10 ನೇ ದಿನದಂದು ಶೇಕಡ 100 ರಷ್ಟು ಬೆಳವಣಿಗೆಯಾಗಿದೆ.
ಸ್ಪುಟ್ನಿಕ್ ಲೈಟ್‌ನೊಂದಿಗೆ SARS-CoV-2 ವಿರುದ್ಧ ಮೊದಲೇ ಅಸ್ತಿತ್ವದಲ್ಲಿರುವ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳ ರೋಗನಿರೋಧಕತೆಯು ಪ್ರತಿರಕ್ಷಣೆಯ 10 ದಿನಗಳ ನಂತರ ಶೇಕಡ 100 ಪ್ರತಿಕಾಯಗಳ ಮಟ್ಟವನ್ನು ಹೆಚ್ಚಿಸುತ್ತದೆ.
ಸ್ಪುಟ್ನಿಕ್ ಲೈಟ್‌ನೊಂದಿಗೆ ವ್ಯಾಕ್ಸಿನೇಷನ್ ಮಾಡಿದ ನಂತರ ಯಾವುದೇ ಗಂಭೀರ ಪ್ರತಿಕೂಲ ಘಟನೆಗಳು ದಾಖಲಾಗಿಲ್ಲ.