ಮಾಸ್ಕೋ: ರಷ್ಯಾದ ಸ್ಪುಟ್ನಿಕ್ ಲೈಟ್ ಕೊರೋನಾ ಲಸಿಕೆಯನ್ನು ಬಳಸಿಕೊಳ್ಳಲು ಅಧಿಕೃತ ಒಪ್ಪಿಗೆ ಸಿಕ್ಕಿದೆ. ಒಂದೇ ಡೋಸ್ ಪಡೆಯುವ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಶೇಕಡ 80 ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ.
ರಷ್ಯಾದ ನೇರ ಹೂಡಿಕೆ ನಿಧಿ (ಆರ್.ಡಿ.ಐ.ಎಫ್.) ಮೇ 6 ರಂದು ಒಂದೇ ಸಲ ಪಡೆದುಕೊಳ್ಳುವ ಸ್ಪುಟ್ನಿಕ್ ಲೈಟ್ ಲಸಿಕೆಯ ಬಳಕೆಯನ್ನು ಅಧಿಕೃತಗೊಳಿಸಿದೆ. ಸ್ಪುಟ್ನಿಕ್ ಲೈಟ್ ಕೊರೋನಾ ವೈರಸ್ ತಡೆ ಲಸಿಕೆಯಾಗಿದ್ದು ಶೇಕಡ 80 ರಷ್ಟು ಪರಿಣಾಮಕಾರಿತ್ವ ಹೊಂದಿದೆ ಎಂದು ರಷ್ಯಾ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ರಷ್ಯಾದ ಗಮಾಲೆ ಇನ್ಸ್ಟಿಟ್ಯೂಟ್ ನಲ್ಲಿ ಅಭಿವೃದ್ಧಿಪಡಿಸಿದ ಕೋವಿಡ್-19 ವಿರುದ್ಧ ಹೋರಾಟದ ಈ ಲಸಿಕೆ ಶೇಕಡ 79.4 ರಷ್ಟು ಪರಿಣಾಮಕಾರಿಯಾಗುದೆ. ಈ ಲಸಿಕೆಗೆ 10 ಡಾಲರ್ ಗಿಂತ ಕಡಿಮೆ ವೆಚ್ಚವಾಗಲಿದೆ. ರಫ್ತು ಮಾಡಲು ಇದನ್ನು ಮೀಸಲಿಡಲಾಗಿದೆ. ಮೊದಲ ಲಸಿಕೆ ಸ್ಪುಟ್ನಿಕ್ ಶೇಕಡ 97.6 ರಷ್ಟು ಪರಿಣಾಮಕಾರಿಯಾಗಿದೆ.