ಮಧ್ಯಪ್ರದೇಶದ ಇಂದೋರ್‌ನಲ್ಲಿ ಮೇ 7ರಂದು ಮೂರು ಅಂತಸ್ತಿನ ವಸತಿ ಕಟ್ಟಡಕ್ಕೆ ಬೆಂಕಿ ಹಚ್ಚಿ ಏಳು ಮಂದಿ ಸಾವನ್ನಪ್ಪಿ ಒಂಬತ್ತು ಮಂದಿ ಗಾಯಗೊಳ್ಳುವುದಕ್ಕೆ ಕಾರಣವಾದ ಭಗ್ನಪ್ರೇಮಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಸಂಜಯ್ ಅಲಿಯಾಸ್ ಶುಭಂ ದೀಕ್ಷಿತ್ ಬಂಧಿತ ಭಗ್ನಪ್ರೇಮಿ. ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ಮಹಿಳೆಯ ಅಕ್ಕನ ಮೇಲಿನ ಕೋಪವನ್ನು ದೀಕ್ಷಿತ್ ಪೊಲೀಸ್ ಠಾಣೆಯಲ್ಲಿ ಎದುರಿಸಿದ. ಈ ಘಟನೆಯ ವಿಡಿಯೋ ದೃಶ್ಯವನ್ನು ಎಎನ್‌ಐ ಸುದ್ದಿ ಸಂಸ್ಥೆ ಟ್ವಿಟರ್‌ನಲ್ಲಿ ಶೇರ್ ಮಾಡಿದೆ.
ಪೊಲೀಸ್ ಸಿಬ್ಬಂದಿ ದೀಕ್ಷಿತ್ ನನ್ನು ವಿಜಯನಗರ ಪೊಲೀಸ್ ಠಾಣೆಗೆ ಕರೆದೊಯ್ದಾಗ ದೀಕ್ಷಿತ್‌ನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ 22 ವರ್ಷದ ಮಹಿಳೆಯ ಅಕ್ಕ, ಆತನ ಕಪಾಳಮೋಕ್ಷ ಮಾಡಿದ್ದಾಳೆ. ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಲೋಹಮಂಡಿ ಪ್ರದೇಶದಲ್ಲಿ ಪೊಲೀಸರನ್ನು ನೋಡಿ, ರಸ್ತೆ ವಿಭಜಕವನ್ನು ಹಾರಿ ಪರಾರಿಯಾಗಲು ಯತ್ನಿಸಿದ ದೀಕ್ಷಿತ್ ರಸ್ತೆಗೆ ಬಿದ್ದು ಏಟು ಮಾಡಿಕೊಂಡಿದ್ದಾನೆ ಎಂದು ಇಂದೋರ್‌ನ ವಿಜಯ್ ನಗರ ಪೊಲೀಸ್ ಠಾಣೆಯ ಉಸ್ತುವಾರಿ ತಹಜೀಬ್ ಖಾಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ದೀಕ್ಷಿತ್ ಕೈ ಮತ್ತು ಕಾಲುಗಳಲ್ಲಿ ರಕ್ತಸ್ರಾವ, ಇಂದೋರ್‌ನ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಮೇಲೆ ಮಲಗಿ ನೋವಿನಿಂದ ನರಳುತ್ತಿರುವುದನ್ನು ತೋರಿಸುವ ಮತ್ತೊಂದು ವಿಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ದ್ವೇಷ ಭಾಷಣ ಪ್ರಕರಣದಲ್ಲಿ ವಾಗ್ದಂಡನೆ – ಯೂ ಟರ್ನ್ ಹೊಡೆದ ದೆಹಲಿ ಪೊಲೀಸ್ !
ಮೂಲತಃ ಉತ್ತರ ಪ್ರದೇಶದ ಝಾನ್ಸಿ ಮೂಲದ ದೀಕ್ಷಿತ್, ಕಳೆದೆರಡು ತಿಂಗಳುಗಳಿಂದ ಇಂದೋರ್‌ನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಆರು ತಿಂಗಳ ಹಿಂದೆ ಬಾಡಿಗೆ ಫ್ಲ್ಯಾಟ್ ಖಾಲಿ ಮಾಡಿದ್ದ. ಅದೇ ಕಟ್ಟಡದಲ್ಲಿ ವಾಸವಿದ್ದ ಮಹಿಳೆಯನ್ನು ಮದುವೆಯಾಗಲು ಬಯಸಿದ್ದು, ಆದರೆ ಆಕೆ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಲಿದ್ದಾಳೆ ಎಂದು ಅರಿತ ಬಳಿಕ ಶನಿವಾರ ಬೆಳಗ್ಗೆ, ದೀಕ್ಷಿತ್, 22 ವರ್ಷದ ಮಹಿಳೆಯ ಸ್ಕೂಟರ್ ಅನ್ನು ಸುಟ್ಟು ಹಾಕಿದ್ದರು, ನಂತರ ಕಟ್ಟಡದ ಪಾರ್ಕಿಂಗ್ ಪ್ರದೇಶದಿಂದ ಬೆಂಕಿ ಮೇಲಕ್ಕೆ ವ್ಯಾಪಿಸಿ ಆವರಣವನ್ನು ಆವರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.