ವಾರಕ್ಕೊಮ್ಮೆ ಮೊಳಕೆ ಧಾನ್ಯಗಳನ್ನು ಸೇವಿಸುವುದರಿಂದ ಹಲವಾರು ರೋಗಗಳಿಂದ ದೂರವಿರಬಹುದು. ಮೊಳಕೆ ಬರಿಸಿದ ಆಹಾರ ಪದಾರ್ಥಗಳಿಂದ ಹೆಚ್ಚಿನ ಪೌಷ್ಟಿಕಾಂಶ ದೊರೆಯುತ್ತದೆ. ಮೊಳಕೆ ಬರಿಸುವುದರಿಂದ ನಾರಿನಾಂಶ ಅಧಿಕಗೊಳ್ಳುತ್ತದೆ.
ಇವು ಜೀರ್ಣ ಕ್ರಿಯೆಗೆ ಮತ್ತು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ನಾರಿನಾಂಶ ದೇಹದ ಅನಗತ್ಯ ಕೊಬ್ಬು ಮತ್ತು ಟಾಕ್ಸಿನ್ ಗಳನ್ನು ಹೊರಹಾಕುತ್ತದೆ. ಮೊಳಕೆ ಕಾಳುಗಳಲ್ಲಿ ದೇಹದ ಚೈತನ್ಯವನ್ನು ಕಾಪಾಡುವ ಅಮೈನೋ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿವೆ.
ಮೊಳಕೆ ಒಡೆಯುವಾಗ ಕ್ಯಾಲ್ಸಿಯಂ ಮೆಗ್ನೀಷಿಯಂ ಇತ್ಯಾದಿಗಳು ಉತ್ಪತ್ತಿ ಆಗುತ್ತವೆ. ಇವು ಸಾಮಾನ್ಯವಾಗಿ ತರಕಾರಿ ಮತ್ತು ಹಣ್ಣುಗಳಿಗಿಂತ ಹೆಚ್ಚು ಮೊಳಕೆ ಕಾಳುಗಳಲ್ಲಿ ಇರುತ್ತದೆ. ಫೈಬರ್ ಅಂಶವೂ ಹೆಚ್ಚಿದ್ದು ಅವು ಪಚನ ಕ್ರಿಯೆಯನ್ನು ಸುಲಭ ಮಾಡುತ್ತದೆ.
ಇದರಲ್ಲಿರುವ ವಿಟಮಿನ್ ಕೆ ಅಂಶವು ರಕ್ತ ಸಂಚಾರ ಸರಿಯಾಗಿ ಆಗುವಂತೆ ಮಾಡುತ್ತದೆ. ಹೆಸರು ಕಾಳು, ಕಡಲೆ ಕಾಳು, ಹುರುಳಿ, ಒಣ ಬಟಾಣಿ ಮುಂತಾದ ಕಾಳುಗಳು ದೇಶದಾದ್ಯಂತ ಕೈಗೆಟಕುವ ದರದಲ್ಲಿ ದೊರೆಯುತ್ತದೆ.