alex Certify ಅನೇಕ ಕಾಯಿಲೆಗಳಿಗೆ ಪರಿಣಾಮಕಾರಿ ಮದ್ದು ಮೊಳಕೆಯೊಡೆದ ಮೆಂತ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನೇಕ ಕಾಯಿಲೆಗಳಿಗೆ ಪರಿಣಾಮಕಾರಿ ಮದ್ದು ಮೊಳಕೆಯೊಡೆದ ಮೆಂತ್ಯ….!

ಮೆಂತ್ಯ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಅದರಲ್ಲೂ ಮೊಳಕೆಯೊಡೆದ ಮೆಂತ್ಯವನ್ನು ತಿನ್ನುವುದರಿಂದ ಆರೋಗ್ಯಕ್ಕೆ ಡಬಲ್‌ ಲಾಭವಿದೆ. ಮೆಂತ್ಯದಲ್ಲಿ ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್, ವಿಟಮಿನ್ ಬಿ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳು ಇವೆ. ಇದು ದೇಹದಿಂದ ಅನೇಕ ರೋಗಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ಮೆಂತ್ಯ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಮೆಂತ್ಯದಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ, ಹಾಗಾಗಿ ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ನಿಮಗೆ ಕರುಳಿನ ಚಲನೆಯ ಸಮಸ್ಯೆ ಇದ್ದರೆ, ಮೊಳಕೆಯೊಡೆದ ಮೆಂತ್ಯವನ್ನು ತಿನ್ನುವುದರಿಂದ ಇದನ್ನು ಪರಿಹರಿಸಬಹುದು. ಮೊಳಕೆ ಬರಿಸಿದ ಮೆಂತ್ಯ ಹೃದಯಕ್ಕೆ ಪ್ರಯೋಜನಕಾರಿ. ಮೊಳಕೆ ಬರಿಸಿದ ಮೆಂತ್ಯವನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.

ಇದರಲ್ಲಿರುವ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಮೆಂತ್ಯ ದೇಹವನ್ನು ನಿರ್ವಿಷಗೊಳಿಸುವ ಕೆಲಸ ಮಾಡುತ್ತದೆ. ಮೊಳಕೆಯೊಡೆದ ಮೆಂತ್ಯವು ತೂಕವನ್ನು ಕಡಿಮೆ ಮಾಡಲು ಸಹ ಸಹಕಾರಿ. ಇದರಲ್ಲಿರುವ ಪೋಷಕಾಂಶಗಳು ಚಯಾಪಚಯವನ್ನು ಹೆಚ್ಚಿಸುತ್ತವೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಮೊಳಕೆಯೊಡೆದ ಮೆಂತ್ಯದ ಕಾಳುಗಳನ್ನು ಸೇವಿಸುವುದರಿಂದ ಕೊಬ್ಬು ವೇಗವಾಗಿ ಕರಗುತ್ತದೆ. ಮೆಂತ್ಯದಲ್ಲಿರುವ ಪೋಷಕಾಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಮೊಳಕೆಯೊಡೆದ ಮೆಂತ್ಯದ ಕಾಳುಗಳನ್ನು ತಿನ್ನುವುದರಿಂದ ಶೀತ ಮತ್ತು ಜ್ವರದಂತಹ ಋತುಮಾನದ ಕಾಯಿಲೆಗಳನ್ನು ತಡೆಯಬಹುದು. ಮೆಂತ್ಯ ನಮ್ಮ ದೇಹಕ್ಕೆ ಉಷ್ಣವನ್ನು ಒದಗಿಸಬಲ್ಲದು, ಆದ್ದರಿಂದ ಚಳಿಗಾಲದಲ್ಲಿ ಮೊಳಕೆ ಬರಿಸಿದ ಮೆಂತ್ಯವನ್ನು ತಿನ್ನುವುದು ಸೂಕ್ತ. ಕೂದಲಿನ ಆರೋಗ್ಯಕ್ಕೂ ಇದು ಅತ್ಯಗತ್ಯ. ಮೊಳಕೆ ಬರಿಸಿದ ಮೆಂತ್ಯವನ್ನು ತಿನ್ನುವುದರಿಂದ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ. ಮೆಂತ್ಯದಲ್ಲಿ ಪ್ರೋಟೀನ್ ಇರುವುದರಿಂದ ಇದು ಕೂದಲನ್ನು ಬಲಪಡಿಸುತ್ತದೆ. ಅದರಲ್ಲಿರೋ ನಿಕೋಟಿನಿಕ್ ಆಮ್ಲ ಕೂಡ ಕೂದಲಿಗೆ ಪ್ರಯೋಜನಕಾರಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...