ಕಾಳುಗಳನ್ನು ಮೊಳಕೆ ಬರಿಸಿ ಸೇವಿಸುವುದರಿಂದ ದೇಹಕ್ಕೆ ಹಲವು ಲಾಭಗಳಿವೆ. ಮೊಳಕೆ ಕಾಳುಗಳಲ್ಲಿ ವಿಟಮಿನ್ ಕೆ, ಸಿ, ಬಿ ಗಳಿದ್ದು ನಮ್ಮ ದೇಹದ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೊಳಕೆ ಬರಿಸುವುದರಿಂದ ಬೇಳೆಕಾಳುಗಳ ಪೋಷಕಾಂಶಗಳು ದ್ವಿಗುಣವಾಗುತ್ತವೆ.
ದಪ್ಪಗಿರುವವರು ಮೊಳಕೆ ಕಾಳು ಸೇವಿಸಿದರೆ ತೂಕ ಇಳಿಸುವುದರ ಜೊತೆಗೆ ಆರೋಗ್ಯವೂ ಉತ್ತಮವಾಗುತ್ತದೆ. ಇದರಲ್ಲಿ ಸೋಡಿಯಮ್ ಕಡಿಮೆ ಇರುವ ಕಾರಣ ಅಧಿಕ ರಕ್ತದೊತ್ತಡ ಇರುವವರು ನಿತ್ಯ ಸೇವಿಸಬಹುದು. ಬೆಳೆಯುವ ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯಕ್ಕೆ ಮೊಳಕೆ ಕಾಳುಗಳು ತುಂಬಾ ಪ್ರಯೋಜನಕಾರಿ. ಇದನ್ನು ತಾಜಾ ಇರುವಾಗಲೇ ಸಲಾಡ್ ರೂಪದಲ್ಲಿ ಸವಿಯಬೇಕು.
ಸಾತ್ವಿಕ ಆಹಾರ ಸೇವನೆ, ಉತ್ತಮ ಆರೋಗ್ಯದ ಹಾದಿ ಎಂಬ ಮಾತಿದೆ. ಅದರಂತೆ ಮೊಳಕೆಕಾಳು ತಿಂದು ದೇಹದ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದು.
ದಪ್ಪ ಶರೀರವನ್ನು ಹೊಂದಿರುವ ವ್ಯಕ್ತಿಗಳು ರಾತ್ರಿಯ ಸಮಯದಲ್ಲಿ ಇದನ್ನು ಸೇವಿಸಬೇಕು ಮತ್ತು ತೆಳ್ಳಗಿನವರು ಬೆಳಗಿನ ವೇಳೆ ಇದನ್ನು ತಿನ್ನುವುದು ಒಳ್ಳೆಯದು.