ಮುಂಬೈ : ತನ್ನದೇ ಸಾವಿನ ಸುದ್ದಿ ಹಬ್ಬಿಸಿ ಪ್ರಚಾರ ಗಿಟ್ಟಿಸಿದ ನಟಿ ಪೂನಂಪಾಂಡೆ ವಿರುದ್ಧ ದೂರು ದಾಖಲಾಗಿದೆ. ಬೋಲ್ಡ್ ನಟಿ ಪೂನಂ ಪಾಂಡೆ ಅವರ ನಕಲಿ ಸಾವಿನ ಸುದ್ದಿ ಎಲ್ಲೆಡೆ ಸೆನ್ಸೇಷನ್ ಮಾಡಿತ್ತು. ಸಾವಿನ ಸುದ್ದಿ ಹಬ್ಬಿಸಿ ನಂತರ ಇದು ಗರ್ಭಕಂಠ ಕ್ಯಾನ್ಸರ್ ಬಗ್ಗೆ ಪ್ರಚಾರ ಮಾಡಲು ಮಾಡಿದ ಜಾಗೃತಿ ಎಂದು ಪೂನಂಪಾಂಡೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದರು.
ಇದೀಗ ಇಎಐಸಿಡಬ್ಲ್ಯೂಎ ಅಧ್ಯಕ್ಷ ಸುರೇಶ್ ಗುಪ್ತಾ ಅವರು ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ. ವಕೀಲ ಅಲಿ ಕಾಶಿಫ್ ಖಾನ್ ದೇಶ್ಮುಖ್ ಅವರು ಕೂಡ ನಟಿ ಮತ್ತು ಅವರ ಪಿಆರ್ ತಂಡದ ವಿರುದ್ಧ ಹೌಟರ್ಫೈ ಏಜೆನ್ಸಿಯೊಂದಿಗೆ ದೂರು ದಾಖಲಿಸಿದ್ದಾರೆ.
ಅಲ್ಲದೇ ಸಾವಿನ ಸುಳ್ಳು ಸುದ್ದಿ ಹಬ್ಬಿಸಿದ ನಟಿ ಪೂನಂಪಾಂಡೆಯನ್ನು ಅರೆಸ್ಟ್ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹೊಸ ಅಭಿಯಾನ ಕೂಡ ಶುರು ಮಾಡಿದ್ದಾರೆ.
#ArrestPoonamPandey ಹ್ಯಾಷ್ ಟ್ಯಾಗ್ ನೊಂದಿಗೆ ಅಭಿಯಾನ ಆರಂಭಿಸಿದ ನೆಟ್ಟಿಗರು ಸಾವಿನ ಸುಳ್ಳು ಸುದ್ದಿ ಹಬ್ಬಿಸಿ ಬಿಟ್ಟಿ ಪ್ರಚಾರ ನಡೆಸಿದ ಪೂನಂಪಾಂಡೆಯನ್ನು ಬಂಧಿಸಿ ಎಂದು ಅಭಿಯಾನ ಆರಂಭಿಸಿದ್ದಾರೆ.
ಗರ್ಭಕಂಠದ ಕ್ಯಾನ್ಸರ್ ನಿಂದ ಪೂನಂ ಪಾಂಡೆ ಸಾವನ್ನಪ್ಪಿದ್ದಾರೆ ಎಂದು ಇನ್ಸ್ಟಾಗ್ರಾಮ್ನಲ್ಲಿ ವರದಿಯಾಗಿತ್ತು. ಶನಿವಾರ, ಪೂನಂ ಪಾಂಡೆ ಸೋಷಿಯಲ್ ಮೀಡಿಯಾದಲ್ಲಿ ತಾನು “ಜೀವಂತವಾಗಿದ್ದೇನೆ” ಎಂದು ಹೇಳಿದರು.
ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಪೂನಂ ಪಾಂಡೆ ಸಾವಿನ ನಾಟಕ ಮಾಡಿದ್ದರು.