ಬೆಂಗಳೂರು: ನೇಮಕದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಶೇಕಡ 2ರಷ್ಟು ಮೀಸಲಾತಿ ನೀಡುವ ಅಧಿಸೂಚನೆಗೆ ಸರ್ಕಾರವೇ ತಡೆ ನೀಡಿದ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗ ಸ್ಪಷ್ಟಪಡಿಸಿದೆ.
ಸರ್ಕಾರ ಕ್ರೀಡಾ ಸಾಧಕರಿಗೆ ಮೀಸಲು ನೀಡಲು 2024ರ ಸೆಪ್ಟೆಂಬರ್ 18ರಂದು ಆದೇಶ ಹೊರಡಿಸಿತ್ತು. ಅದನ್ನು ಜಾರಿ ಮಾಡಲು ಅಕ್ಟೋಬರ್ 2ರಿಂದ ಆರಂಭವಾಗಬೇಕಿದ್ದ ಕೃಷಿ ಇಲಾಖೆ ಅಧಿಕಾರಿಗಳ ನೇಮಕಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಂದೂಡಲಾಗಿತ್ತು. ಆದರೆ, ನಂತರ ಸರ್ಕಾರವೇ ಡಿಸೆಂಬರ್ 4ರಂದು ಶೇಕಡ 2ರಷ್ಟು ಕ್ರೀಡಾ ಸಾಧಕರಿಗೆ ಮೀಸಲಿಡುವ ಅಧಿಸೂಚನೆಯನ್ನು ತಡೆಹಿಡಿದಿದೆ ಎಂದು ಹೇಳಲಾಗಿದೆ.
ಹೀಗಾಗಿ ತಡೆಹಿಡಿಯಲಾಗಿದ್ದ ಕೃಷಿ ಇಲಾಖೆಗೆ ನೇಮಕಾತಿ ಪ್ರಕ್ರಿಯೆ ಮುಂದುವರಿಸಲಾಗಿದೆ. ಇದಕ್ಕೆ ಕ್ರೀಡಾ ಮೀಸಲಾತಿ ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ.