ಭಾರತದಲ್ಲಿ ಸ್ಫೋರ್ಟ್ಸ್ ಬೈಕ್ ಪ್ರೇಮಿಗಳ ಸಂಖ್ಯೆ ಸಾಕಷ್ಟಿದೆ. ಅಡ್ವೆಂಚರ್ ಬೈಕ್‌ಗಳು ಮತ್ತು ಟೂರರ್ ಬೈಕ್‌ಗಳಿಗಿಂತ ಸ್ಪೋರ್ಟ್ಸ್ ಬೈಕ್‌ಗಳನ್ನು ಜನರು ಹೆಚ್ಚು ಇಷ್ಟಪಡ್ತಾರೆ. ಹಳೆ ಬೈಕ್ ಮಾರಾಟ ಮಾಡಿ ಹೊಸ ಬೈಕ್ ಖರೀದಿ ಮಾಡುವ ಪ್ಲಾನ್ ನಲ್ಲಿದ್ದರೆ ಅಥವಾ ಮನೆಯಲ್ಲೊಂದು ಸ್ಫೋರ್ಟ್ಸ್ ಬೈಕ್ ಬೇಕು ಎನ್ನುವ ಆಸೆ ಹೊಂದಿದ್ದರೆ ನಿಮಗೊಂದು ಖುಷಿ ಸುದ್ದಿ ಇದೆ. ಮೂರು ಲಕ್ಷದೊಳಗೆ ಸಿಗುವ ಕೆಲ ಸ್ಫೋರ್ಟ್ಸ್ ಬೈಕ್ ಗಳ ಮಾಹಿತಿ ಇಲ್ಲಿದೆ.
ಹೋಂಡಾ CB300R : ಸ್ಫೋರ್ಟ್ಸ್ ಬೈಕ್ ಪಟ್ಟಿಯಲ್ಲಿ ಇದು ಮೊದಲ ಸ್ಥಾನದಲ್ಲಿದೆ. ನಿಮಗೆ ಈ ಬೈಕ್ ಭಾರತದಲ್ಲಿ 2.40 ಲಕ್ಷ ರೂಪಾಯಿಗೆ ಲಭ್ಯವಿದೆ. ಇದು 286cc, ಲಿಕ್ವಿಡ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದೆ.
ಟಿವಿಎಸ್ ಅಪಾಚೆ RR 310 : ಎರಡನೆ ಬೈಕ್ ಟಿವಿಎಸ್ ಅಪಾಚೆ RR 310. ಇದರ ಬೆಲೆ ಭಾರತದಲ್ಲಿ 2.72 ಲಕ್ಷ ರೂಪಾಯಿ ಆಗಿದೆ. ನಾವು ಹೇಳ್ತಿರೋದು ಶೋ ರೂಮ್ ಬೆಲೆ. ಈ ಬೈಕ್ 312.22cc ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ.
ಟಿಎಂಟಿ ಆರ್ಸಿ 390 : ನೀವು ಮೂರು ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಹಣ ಕೊಡ್ತಿರಿ ಅಂದ್ರೆ ಟಿಎಂಟಿ ಆರ್ಸಿ 390 ಖರೀದಿ ಮಾಡಬಹುದು. ಇದ್ರ ಬೆಲೆ 3.18 ಲಕ್ಷ ರೂಪಾಯಿ. ಇದು 373cc, ಸಿಂಗಲ್ ಸಿಲಿಂಡರ್ ಮತ್ತು ಲಿಕ್ವಿಡ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದೆ.
ಟಿವಿಎಸ್ ಅಪಾಚೆ RTR 310 : ಇದು ಟಿವಿಎಸ್‌ನ ಮತ್ತೊಂದು ಶಕ್ತಿಶಾಲಿ ಬೈಕ್. 3 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಇದು ಲಭ್ಯವಿದೆ. ಇದ್ರ ಬೆಲೆ ಭಾರತದಲ್ಲಿ 2.43 ಲಕ್ಷದಿಂದ ಪ್ರಾರಂಭವಾಗಿ 2.64 ಲಕ್ಷದವರೆಗೆ ಸಿಗುತ್ತದೆ.