alex Certify ತೊಟ್ಟಿಲ ಪಕ್ಕ ತಂತಾನೇ ಚಲಿಸುವ ಗೊಂಬೆ: ಭಯಾನಕ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೊಟ್ಟಿಲ ಪಕ್ಕ ತಂತಾನೇ ಚಲಿಸುವ ಗೊಂಬೆ: ಭಯಾನಕ ವಿಡಿಯೋ ವೈರಲ್​

ಹಾರರ್​ ಚಿತ್ರಗಳಲ್ಲಿ ಗೊಂಬೆಗಳನ್ನು ಭಯಾನಕವಾಗಿ ತೋರಿಸುವುದುಂಟು. ಅದೆಲ್ಲಾ ನಿಜ ಎಂದು ನೀವು ಭಾವಿಸುವುದಾದರೆ ಈ ವಿಡಿಯೋ ಕೂಡ ನಿಮ್ಮನ್ನು ಬೆಚ್ಚಿಬೀಳಿಸಬಹುದು. ಅದೇನೆಂದರೆ ಮಗು ಮಲಗಿದ ತೊಟ್ಟಿಲ ಬಳಿ ಇರುವ ಗೊಂಬೆಯೊಂದು ತಂತಾನೆ ಚಲಿಸುವುದನ್ನು ನೋಡಬಹುದು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಗುವೊಂದು ತೊಟ್ಟಿಲಲ್ಲಿ ಮಲಗಿರುವುದನ್ನು ಕಾಣಬಹುದು. ಅದರ ಪಕ್ಕದಲ್ಲಿ ಒಂದು ಗೊಂಬೆ ಇದೆ. ಬಲೂನ್​ನಂತಿರುವ ಗೊಂಬೆ ತಂತಾನೇ ಚಲಿಸುತ್ತದೆ. ಈ ಗೊಂಬೆಯನ್ನು ನೋಡಿ ತೊಟ್ಟಿಲಲ್ಲಿ ಇರುವ ಮಗು ನಗುತ್ತದೆ. ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಬಿಯಾಂಡ್ ದಿ ಸ್ಪೆಕ್ಟ್ರಮ್ ಆಫ್ ಲೈಟ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಈ ವಿಡಿಯೋ ನೋಡಿ ಹಲವರು ಬೆಚ್ಚಿಬಿದ್ದಿದ್ದರೆ, ಇದು ಕೀಲಿ ಗೊಂಬೆಯಾಗಿದೆ ಎಂದಿದ್ದಾರೆ ಹಲವರು. ಈ ವಿಡಿಯೋವನ್ನು ಕ್ರಾಪ್ ಮಾಡಲಾಗಿದೆ ಎಂದು ಕೆಲವರು ಹೇಳುತ್ತಿದ್ದರೆ, ಬಲೂನ್​ ಗೊಂಬೆಯನ್ನು ಕಾಣದ ದಾರದಿಂದ ಎಳೆಯಲಾಗುತ್ತಿದೆ ಎಂದಿದ್ದಾರೆ ಇನ್ನು ಹಲವರು.

https://youtu.be/9taPNoCfHG8

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...