
ಸಾಮಾಜಿಕ ಜಾಲತಾಣದಲ್ಲಿ ಭೂತ ಪ್ರೇತ ಕುರಿತ ವಿಡಿಯೋಗಳ ಕುರಿತು ಆಗಾಗ್ಗೆ ಚರ್ಚೆ ಆಗುತ್ತಿರುತ್ತದೆ.
ಅಂತಹ ಒಂದು ಇತ್ತೀಚಿನ ಪ್ರಕರಣದಲ್ಲಿ, ಅರ್ಜೆಂಟೀನಾದ ಆಸ್ಪತ್ರೆಯಲ್ಲಿ ನಡೆಯುತ್ತಿರುವ ವಿಲಕ್ಷಣ ಘಟನೆಯನ್ನು ತೋರುವ ವಿಡಿಯೋ ವೈರಲ್ ಆಗಿದೆ.
‘ಅಗೋಚರ ರೋಗಿಯ’ ವೀಡಿಯೊ ಕಾಣಿಸಿಕೊಂಡಿದ್ದು, ವಿಸ್ಮಯಕಾರಿ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಗೋಚರಿಸದ ‘ಪ್ರೇತ ರೋಗಿ’ ಎಂದು ವೀಕ್ಷಕರನ್ನು ಅನುಮಾನಿಸುವಂತೆ ಮಾಡಿದೆ.
ಆದರೆ ಅದು ಸಿಬ್ಬಂದಿಯೊಂದಿಗೆ ಸಂಭಾಷಣೆಯಲ್ಲಿ ತೊಡಗಿಸಿಕೊಂಡಿದೆ! ವೀಡಿಯೊ ಲಕ್ಷಾಂತರ ವೀಕ್ಷಣೆ ಗಳಿಸಿದ್ದು, ಜಾಲತಾಣಿಗರನ್ನು ದಿಗ್ಭ್ರಮೆಗೊಳಿಸಿತು ಮತ್ತು ಕೆಲವರನ್ನು ಭಯಭೀತಗೊಳಿಸಿತು!
ಇದನ್ನು ರೆಡ್ಡಿಟ್ ಬಳಕೆದಾರರು ಹಂಚಿಕೊಂಡಿದ್ದಾರೆ, ಅವರು ಅರ್ಜೆಂಟೈನಾದ ಫಿನೊಚಿಯೆಟ್ಟೊ ಸ್ಯಾನಟೋರಿಯಂ ಕಟ್ಟಡದಲ್ಲಿ ಬೆಳಿಗ್ಗೆ 3 ಗಂಟೆಗೆ ಸಂಭವಿಸಿದ ವಿಲಕ್ಷಣ ಘಟನೆಯ ಉದಾಹರಣೆಯನ್ನು ನೀಡಿದರು.
ಬ್ಯೂನಸ್ ಐರಿಸ್‌ನಲ್ಲಿರುವ ಖಾಸಗಿ ಆರೈಕೆ ಕೇಂದ್ರದ ಪ್ತವೇಶ ದ್ವಾರದಲ್ಲಿ ಸ್ವಯಂಚಾಲಿತ ಪ್ರವೇಶ ಬಾಗಿಲು ತೆರೆದಾಗ ಸಿಬ್ಬಂದಿ ಕುಳಿತಿರುವುದನ್ನು ಕ್ಲಿಪ್ ತೋರಿಸಿದೆ. ಸಿಸಿ ಟಿವಿಯಲ್ಲಿ ಬಾಗಿಲಿನಿಂದ ಯಾರೂ ಪ್ರವೇಶಿಸುವುದನ್ನು ತೋರಿಸದಿದ್ದರೂ, ಸಿಬ್ಬಂದಿ ವಿವರ ತೆಗೆದುಕೊಳ್ಳಲು ಎದ್ದು ನಿಂತಾಗ ಮತ್ತು ರೋಗಿಯೊಂದಿಗೆ ಮಾತನಾಡುವಂತೆ, ಬಳಿಕ ಕ್ಲಿಪ್‌ಬೋರ್ಡ್‌ನಲ್ಲಿ ಬರೆಯುವಾಗ ಎದುರಿಗೆ ಯಾರೋ ಇದ್ದಂತೆ ಭಾಸವಾಗುತ್ತದೆ. ಯಾರನ್ನೋ ಒಳಗೆ ಬಿಡಲು ಆ ಸಿಬ್ಬಂದಿ ಲೈನ್ ಡಿವೈಡರ್ ಅನ್ನು ಸಹ ತೆಗೆದು ಪುನಃ ಹಾಕಿದರು.
ಮಾಧ್ಯಮ ವರದಿಯ ಪ್ರಕಾರ, ಅರ್ಜೆಂಟೀನಾದಲ್ಲಿ ಈ ಘಟನೆ ಸಂಭವಿಸುವ ಒಂದು ದಿನದ ಮೊದಲು ಅದೇ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಸಾವನ್ನಪ್ಪಿದ್ದರು.
ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗದಿದ್ದರೂ, ಸಾಮಾಜಿಕ ಮಾಧ್ಯಮ ಬಳಕೆದಾರರು ಅದನ್ನು ಜೋಕ್ ಅಥವಾ ವಿಡಿಯೋ ತುಣುಕಿನಲ್ಲಿ ರೋಗಿಯನ್ನು ಸೆರೆಹಿಡಿಯಲು ಸಾಧ್ಯವಾಗದ ಗ್ಲಿಚ್ ಎಂದು ಹೇಳಿಕೊಂಡಿದ್ದಾರೆ. ಕೆಲವರು ಸ್ವಯಂಚಾಲಿತ ಬಾಗಿಲು ದೋಷಪೂರಿತವಾಗಿರಬಹುದು ಎಂದು ಹೇಳಿದರು.