
ಶನಿವಾರದಂದು ಕಿಂಗ್ ಚಾರ್ಲ್ಸ್ ಅವರ ಪಟ್ಟಾಭಿಷೇಕದ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕರ ಗುಂಪಿನ ನಡುವೆ ಉದ್ರೇಕಗೊಂಡ ಕುದುರೆಯೊಂದು ನಿಯಂತ್ರಣ ಕಳೆದುಕೊಂಡಿತು. ಕಿಂಗ್ ಚಾರ್ಲ್ಸ್ III ವೆಸ್ಟ್ ಮಿನ್‌ಸ್ಟರ್ ಅಬೆಯಿಂದ ಬಕಿಂಗ್‌ಹ್ಯಾಮ್ ಅರಮನೆಗೆ ಹಿಂತಿರುಗಿದ ಕೆಲವೇ ನಿಮಿಷಗಳಲ್ಲಿ ಈ ಘಟನೆ ಸಂಭವಿಸಿದೆ.
ಇದೀಗ ವೈರಲ್ ಆಗಿರುವ ಘಟನೆಯ ವೀಡಿಯೊದಲ್ಲಿ ಕುದುರೆಯೊಂದು ಮೆರವಣಿಗೆಯ ಸಾಲಿನಿಂದ ದೂರ ಸರಿದು ಜನರತ್ತ ನುಗ್ಗಿತು. ಕೆಲ ಸಮಯದ ನಂತರ ಅದು ಮತ್ತೆ ಮೆರವಣಿಗೆಗೆಂದು ಕುದುರೆಗಳು ನಿಂತಿದ್ದ ಸ್ಥಳಕ್ಕೆ ವಾಪಸ್ಸಾಯಿತು.
ಚಾರ್ಲ್ಸ್ ಮತ್ತು ಕ್ವೀನ್ ಕ್ಯಾಮಿಲ್ಲಾರನ್ನು ಹೊತ್ತೊಯ್ಯುತ್ತಿದ್ದ ರಥದ ಹಿಂದೆ ಸ್ವಲ್ಪ ದೂರದಲ್ಲಿ ರಾಜನ ರಾಯಲ್ ಹೌಸ್‌ಹೋಲ್ಡ್ ನ ಬಳಿ ನಿಂತಿದ್ದ ಜನರಿಗೆ ಕುದುರೆ ಡಿಕ್ಕಿ ಹೊಡೆದಿದೆ. ದಿಗ್ಭ್ರಮೆಗೊಂಡ ಪ್ರೇಕ್ಷಕರು ಚದುರಿದರು.
ಆದರೆ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಚಾರ್ಲ್ಸ್ III ಶನಿವಾರದಂದು ಬ್ರಿಟನ್‌ನಲ್ಲಿ 7 ದಶಕದ ನಂತರ ಮೊದಲ ಪಟ್ಟಾಭಿಷೇಕದಲ್ಲಿ ಅಧಿಕೃತವಾಗಿ ರಾಜರಾಜರು.