alex Certify ಏರ್ ​ಲೈನ್ಸ್​ ಸಿಬ್ಬಂದಿ ಜತೆ ಮಹಿಳೆ ರಂಪಾಟ; ವಿಮಾನ ನಿಲ್ದಾಣದಲ್ಲೇ ಹೊಡೆದಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್ ​ಲೈನ್ಸ್​ ಸಿಬ್ಬಂದಿ ಜತೆ ಮಹಿಳೆ ರಂಪಾಟ; ವಿಮಾನ ನಿಲ್ದಾಣದಲ್ಲೇ ಹೊಡೆದಾಟ

ಅಮೆರಿಕದ ಪ್ರಮುಖ ಅತಿ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಸ್ಪಿರಿಟ್​ ಏರ್​ಲೈನ್ಸ್​ನ ಏಜೆಂಟ್​ ಹಾಗೂ ಮಹಿಳಾ ಸಿಬ್ಬಂದಿ ನಡುವೆ ನಡೆದ ಬಡಿದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಡಲ್ಲಾಸ್​-ಫೋರ್ಟ್​ ವರ್ತ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಸ್ಪಿರಿಟ್​ ಏರ್​ಲೈನ್ಸ್​ ಪ್ರತಿನಿಧಿಯು ತೀವ್ರ ವಾಗ್ವಾದ ನಡೆಸುತ್ತಿರುವುದನ್ನು 90 ಸೆಕೆಂಡುಗಳ ವಿಡಿಯೊದಲ್ಲಿ ನೋಡಬಹುದು.

ಆರಂಭದಲ್ಲಿ ಗೂಳಿಯಂತೆ ಒಬ್ಬರನ್ನೊಬ್ಬರು ತಳ್ಳಿಕೊಳ್ಳುತ್ತಾರೆ, ಪೈಪೋಟಿಗೆ ಬಿದ್ದಂತೆ ವಾಗ್ವಾದ ಮಾಡಿಕೊಳ್ಳುತ್ತಾರೆ. ಕಿರುಚಿಕೊಳ್ಳುತ್ತಾರೆ. ಒಂದು ಹಂತದಲ್ಲಿ ಮಹಿಳೆಯು ಏರ್​ಲೈನ್ಸ್​ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಇದರಿಂದ ಆತ ಕೂಡ ಕೆರಳಿದ್ದು, ತಿರುಗಿ ಬಾರಿಸಿದ್ದಲ್ಲದೆ ಆಕೆಯನ್ನು ತಳ್ಳಿ, ತಾನೂ ನೆಲಕ್ಕುರುಳಿದ್ದಾನೆ.

ಅವಳು ಹಿಂದೆ ಸರಿಯುತ್ತಿದ್ದಂತೆ ಆತನೂ ಅವಳನ್ನು ತಳ್ಳಿಕೊಂಡಂತೆ ಹಿಂಬಾಲಿಸುವಾಗ ಅವನ ಮೇಲೆ ಜನಾಂಗೀಯ ಮತ್ತು ಹೋಮೋಫೋಬಿಕ್​ ನಿಂದನೆಗಳನ್ನು ಮಾಡುತ್ತಾಳೆ. ಒಬ್ಬ ವ್ಯಕ್ತಿ ಇಬ್ಬರನ್ನು ಬೇರ್ಪಡಿಸಲು ಪ್ರಯತ್ನಿಸುತ್ತಾನೆ, ಮಹಿಳೆ ಏಜೆಂಟ್​ ಅನ್ನು ತಳ್ಳುತ್ತಾಳೆ ಮತ್ತು ಅವನನ್ನು ಜರಿಯುತ್ತಾಳೆ.

ತಳ್ಳಾಟದ ಬಳಿಕ ಆ ಮಹಿಳೆ ಓಡಿಹೋಗಲು ಪ್ರಯತ್ನಿಸುತ್ತಿರುವಾಗ ಆತನೂ ಅವಳನ್ನು ಹಿಂಬಾಲಿಸುತ್ತಾನೆ, ನಂತರ ಅವಳ ತಲೆಗೆ ಗುದ್ದುತ್ತಾನೆ. ಇದನ್ನು ನೋಡಿದ ಇತರರು ಬೇರ್ಪಡಿಸಲು ಧಾವಿಸುತ್ತಾರೆ. ಮಹಿಳೆಯ ವಿರುದ್ಧ ಹೋರಾಡುವ ಏಜೆಂಟ್​ಗೆ ಇನ್ನೊಬ್ಬ ವ್ಯಕ್ತಿ ಸವಾಲು ಹಾಕುವುದರೊಂದಿಗೆ ವಿಡಿಯೊ ಕೊನೆಗೊಳ್ಳುತ್ತದೆ.

ಈ ಪ್ರಕರಣ ಮುಂದೇನಾಯಿತೆಂದು ಗೊತ್ತಾಗಿಲ್ಲ. ಆದರೆ, ಮುಂದುವರಿದ ದೇಶವೊಂದರ ವಿಮಾನ ನಿಲ್ದಾಣದಲ್ಲಿ ಅನಾಗರಿಕ ವರ್ತನೆಯಂತೂ ಜಗಜ್ಜಾಹಿರಾಗಿದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...