ಕೆಲವು ಪ್ರಾಣಿಗಳು ಬೇಟೆಯಾಡುತ್ತವೆ ಮತ್ತು ನೈಸರ್ಗಿಕ ಪರಭಕ್ಷಕಗಳಾಗಿವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಐಎಫ್‌ಎಸ್ ಅಧಿಕಾರಿ ಸಾಕೇತ್ ಬಡೋಲಾ ಅವರು ಹಂಚಿಕೊಂಡಿರುವ ವಿಡಿಯೋ. ಎದೆ ಝಲ್ಲೆನ್ನಿಸುವ ವಿಡಿಯೋದಲ್ಲಿ, ಚಿರತೆಯೊಂದು ಹಸುವನ್ನು ಬೇಟೆಯಾಡುತ್ತಿರುವುದನ್ನು ಕಾಣಬಹುದು.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಸಾಕೇತ್ ಬಡೋಲಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಚಿರತೆಯ ಮಾರಣಾಂತಿಕ ಹಿಡಿತದಿಂದ ಹಸು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ. ಚಿರತೆ ಹಸುವನ್ನು ರೇಲಿಂಗ್‌ನಡಿಯಿಂದ ಎಳೆಯಲು ಪ್ರಯತ್ನಿಸುತ್ತಿತ್ತು. ಆದರೆ, ಹಸು ಗಟ್ಟಿಯಾಗಿ ಹಿಡಿದು ನಿಂತಿತ್ತು. ಹಾಗೆಯೇ ಚಿರತೆ ಕೂಡ ತನ್ನ ದವಡೆ ಹಲ್ಲಿನಲ್ಲಿ ಅದರ ಕುತ್ತಿಗೆಯನ್ನು ಬಲವಾಗಿ ಕಚ್ಚಿ ಹಿಡಿದಿತ್ತು.
ಚಿರತೆ ಅಂತಿಮವಾಗಿ ಯಶಸ್ವಿಯಾಯಿತು. ಕೊನೆಯಲ್ಲಿ ಹಸುವನ್ನು ಎಳೆದುಕೊಂಡು ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ 55 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ನೆಟ್ಟಿಗರಿಂದ ಪ್ರತಿಕ್ರಿಯೆಗಳ ಸರಣಿಯೊಂದಿಗೆ ವೈರಲ್ ಆಗಿದೆ. ಕೆಲವರು ಇದನ್ನು ಪ್ರಕೃತಿಯ ನಿಯಮ ಎಂದು ಕರೆದರೆ, ಇತರರು ಹಸುವಿನ ಸಾವಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.