
ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆ 2024ಕ್ಕಾಗಿ ಲಖಿಂಪುರ ಖೇರಿಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಸ್ಪೈಡರ್ ಮ್ಯಾನ್ ವೇಷ ಧರಿಸಿದ ಅಭ್ಯರ್ಥಿ ಆಗಮಿಸಿ ಎಲ್ಲರನ್ನು ಅಚ್ಚರಿಗೊಳಿಸಿದರು. ಅಭ್ಯರ್ಥಿಯನ್ನು ಲಕ್ನೋ ಮೂಲದ ಆದರ್ಶ್ ಪಾಂಡೆ ಎಂದು ಗುರುತಿಸಲಾಗಿದೆ.
“ಸ್ಪೈಡರ್ ಮ್ಯಾನ್” ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿರುವ ಆದರ್ಶ್ ಸೂಪರ್ ಹೀರೋ ವೇಷಭೂಷಣದಲ್ಲಿ ಮನರಂಜನಾ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಯುಪಿ ಪೊಲೀಸ್ ನೇಮಕಾತಿ ಪರೀಕ್ಷೆ 2024 ರ ಪ್ರವೇಶವನ್ನು ಸ್ಮರಣೀಯವನ್ನಾಗಿಸಲು ಈ ರೀತಿ ವೇಷಭೂಷಣದಲ್ಲಿ ಬರಲು ನಿರ್ಧರಿಸಿದ್ದರಂತೆ. ಕಾನ್ಸ್ ಟೇಬಲ್ ಆಯ್ಕೆ ಪರೀಕ್ಷೆಗೆ ತೆರಳುವ ಮೊದಲು ಸ್ಪೈಡರ್ ಮ್ಯಾನ್ ವೇಷದಲ್ಲಿ ಓಡಾಡುತ್ತಿದ್ದ ಅವರು ಬಳಿಕ ಪರೀಕ್ಷಾ ಕೇಂದ್ರದ ಬಳಿಯೇ ಬಟ್ಟೆ ಖರೀದಿಸಿ ಸಾಮಾನ್ಯ ಬಟ್ಟೆ ತೊಟ್ಟು ಪರೀಕ್ಷೆಗೆ ಕುಳಿತುಕೊಂಡರು.
ಸ್ಪೈಡರ್ ಮ್ಯಾನ್ ವೇಷಭೂಷಣದಲ್ಲಿ ಪೊಲೀಸ್ ಪರೀಕ್ಷೆ ಗೆ ಆಗಮಿಸಿದ ಇವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.