ಹಸಿರು ಮೆಣಸಿನಕಾಯಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಕೆಲವೊಂದು ಪದಾರ್ಥಗಳಿಗೆ ಕೆಂಪು ಮೆಣಸಿನಕಾಯಿ ಹಾಕಿದ್ರೆ, ಹಸಿರು ಮೆಣಸಿನಕಾಯಿ ಹಾಕಿದ ರುಚಿ ಬರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಹಸಿರು ಮೆಣಸಿನ ಕಾಯಿ ಸೇವನೆ ಮಾಡದಂತೆ ಕೆಲವರು ಸಲಹೆ ನೀಡ್ತಾರೆ. ಆದ್ರೆ ಹಸಿರು ಮೆಣಸಿನ ಕಾಯಿಯಲ್ಲೂ ಸಾಕಷ್ಟು ಔಷಧಿ ಗುಣವಿದೆ. ಇದು ಆರೋಗ್ಯಕ್ಕೆ ಒಳ್ಳೆಯದು.
ಹಸಿರು ಮೆಣಸಿನಕಾಯಿ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ದೇಹವನ್ನು ಆರೋಗ್ಯವಾಗಿರಿಸುತ್ತದೆ. ಇದು ಕ್ಯಾಲೊರಿ ಹೊಂದಿರುವುದಿಲ್ಲ. ಹಸಿರು ಮೆಣಸಿನಕಾಯಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಚಯಾಪಚಯ ಶಕ್ತಿ ಚೆನ್ನಾಗಿರುತ್ತದೆ.
ಹಸಿರು ಮೆಣಸಿನಕಾಯಿಯಲ್ಲಿ ಆಂಟಿ-ಆಕ್ಸಿಡೆಂಟ್ ಸಮೃದ್ಧವಾಗಿವೆ. ಇದರಿಂದಾಗಿ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಸಿರು ಮೆಣಸಿನಕಾಯಿಯನ್ನು ಸೇವಿಸುವುದರಿಂದ ಪ್ರಾಸ್ಟೇಟ್ ಸಂಬಂಧಿತ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
ಹಸಿರು ಮೆಣಸಿನಕಾಯಿ ತಿನ್ನುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ರಕ್ತ ಪರಿಚಲನೆ ಸರಾಗವಾಗುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ರೂಪುಗೊಳ್ಳುವುದಿಲ್ಲ. ಹೃದಯ ಸಂಬಂಧಿತ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.
ಹಸಿರು ಮೆಣಸಿನಕಾಯಿಗಳು ಕ್ಯಾಪ್ಸೈಸಿನ್ ಎಂಬ ಅಂಶವನ್ನು ಹೊಂದಿರುತ್ತವೆ. ಮೆದುಳಿನ ಒಂದು ಭಾಗವಾದ ಹೈಪೋಥಾಲಮಸ್ ಮೇಲೆ ಪರಿಣಾಮ ಬೀರಿದ ತಕ್ಷಣ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಭಾರತದ ಅತ್ಯಂತ ಬಿಸಿಯಾದ ಸ್ಥಳಗಳಲ್ಲಿಯೂ ಸಹ ಹಸಿ ಮೆಣಸಿನಕಾಯಿಗಳನ್ನು ಇದೇ ಕಾರಣಕ್ಕೆ ಸೇವಿಸಲಾಗುತ್ತದೆ.
ಹಸಿರು ಮೆಣಸಿನಕಾಯಿಗಳಲ್ಲಿ ಕಂಡುಬರುವ ಕ್ಯಾಪ್ಸೈಸಿನ್ ರಕ್ತ ಪರಿಚಲನೆಯನ್ನು ಸಮತೋಲನದಲ್ಲಿರಿಸುತ್ತದೆ, ಇದರಿಂದಾಗಿ ಶೀತ ಮತ್ತು ಸೈನಸ್ ಸೋಂಕಿನ ಅಪಾಯ ಕಡಿಮೆಯಾಗುತ್ತದೆ. ಶೀತ ಬಂದಾಗ ಹಸಿ ಮೆಣಸಿನಕಾಯಿ ತಿನ್ನಬೇಕು.
ಹಸಿರು ಮೆಣಸಿನಕಾಯಿಗಳನ್ನು ತಿನ್ನುವುದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಶಾಖವು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಹುಣ್ಣುಗಳಿಂದ ತೊಂದರೆಗೀಡಾದ ಜನರಿಗೆ ಮಸಾಲೆಯುಕ್ತ ಆಹಾರ ಸೇವಿಸುವುದು ಕಷ್ಟವಾಗಿದ್ದರೂ, ಹಸಿರು ಮೆಣಸಿನಕಾಯಿಗಳ ಸೇವನೆಯು ಗುಳ್ಳೆಗಳನ್ನು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ.
ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುವ ಹಸಿರು ಮೆಣಸಿನಕಾಯಿಗಳು ಕಣ್ಣು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಹಸಿರು ಮೆಣಸಿನಕಾಯಿಯನ್ನು ತಂಪಾದ ಜಾಗದಲ್ಲಿ ಇಡಬೇಕು.
ಹಸಿರು ಮೆಣಸಿನಕಾಯಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಮಧುಮೇಹ ಇದ್ದವರು ಹಸಿರು ಮೆಣಸಿನಕಾಯಿಗಳನ್ನು ಸೇವಿಸಬೇಕು.
ಹಸಿರು ಮೆಣಸಿನಕಾಯಿಯಲ್ಲಿ ಕಬ್ಬಿಣವು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.
ಹಸಿರು ಮೆಣಸಿನಕಾಯಿಗಳ ಸೇವನೆಯು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.