ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದಿದೆ. ವಿಮಾನ ಪ್ರಯಾಣಿಕರು, ವಿಮಾನ ಇಳಿದ ನಂತ್ರ ಪ್ರತ್ಯೇಕ ಕ್ಯಾಬ್ ಬುಕ್ ಮಾಡಬೇಕಾಗಿಲ್ಲ. ಸ್ಪೈಸ್ ಜೆಟ್ ತನ್ನ ಪ್ರಯಾಣಿಕರಿಗಾಗಿ ಹೊಸ ಸೇವೆ ಶುರು ಮಾಡಿದೆ. ಈ ಸೇವೆಯಡಿ, ಪ್ರಯಾಣಿಕರು, ಪ್ರಯಾಣದ ಸಮಯದಲ್ಲೇ ಕ್ಯಾಬ್ ಬುಕ್ ಮಾಡಬಹುದು.
ವಿಮಾನದಲ್ಲಿರುವಾಗ್ಲೇ ಪ್ರಯಾಣಿಕರು ಸ್ಪೈಸ್ ಸ್ಕ್ರೀನ್ ಬಳಸಿ, ಟ್ಯಾಕ್ಸಿಗಳನ್ನು ಬುಕ್ ಮಾಡಬಹುದು. ಸ್ಪೈಸ್ ಜೆಟ್ ಪ್ರಯಾಣಿಕರು ತಮ್ಮ ಭಾರವಾದ ಸಾಮಾನುಗಳನ್ನು ಕ್ಯಾಬ್ ನಿರ್ಗಮನ ಪ್ರದೇಶಕ್ಕೆ ಕೊಂಡೊಯ್ಯುವ ಅಗತ್ಯವಿಲ್ಲ. ಇಂದಿನಿಂದ ಅಂದರೆ ಆಗಸ್ಟ್ 12 ರಿಂದ ದೆಹಲಿ ವಿಮಾನ ನಿಲ್ದಾಣದಿಂದ ಈ ಸೇವೆ ಆರಂಭಿಸಲಾಗಿದೆ. ಈ ಸೇವೆ ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತಾ, ಗೋವಾ, ಅಹಮದಾಬಾದ್ ಮತ್ತು ಪುಣೆ ಸೇರಿದಂತೆ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಲಭ್ಯವಾಗಲಿದೆ.
ದೇಶೀಯ ವಿಮಾನಯಾನ ಉದ್ಯಮದಲ್ಲಿ ಈ ರೀತಿಯ ಮೊದಲ ಸೇವೆ ಇದಾಗಿದೆ. ಇದು ಪ್ರಯಾಣಿಕರ ಸಮಯವನ್ನು ಉಳಿಸಲಿದೆ. ಟ್ಯಾಕ್ಸಿಗಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ. ಸ್ಪೈಸ್‌ಸ್ಕ್ರೀನ್‌ನಲ್ಲಿ ಪ್ರಯಾಣಿಕರು ಟ್ಯಾಕ್ಸಿಯನ್ನು ಬುಕ್ ಮಾಡಿ, ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ಒಟಿಪಿ ಬರಲಿದೆ. ಸ್ಪೈಸ್‌ಜೆಟ್ ಕಳೆದ ವರ್ಷ ಆಗಸ್ಟ್ ನಲ್ಲಿ ಸ್ಪೈಸ್‌ಸ್ಕ್ರೀನ್ ಪ್ರಾರಂಭಿಸಿದೆ.