ವಿಮಾನದ ಮುಂದಿನ ಗಾಜು ಸೀಳು ಬಿಟ್ಟ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗೋರಖ್ ಪುರಕ್ಕೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ ಮುಂಬೈ ವಿಮಾನನಿಲ್ದಾಣಕ್ಕೆ ವಾಪಸಾದ ಘಟನೆ ಶನಿವಾರ ನಡೆದಿದೆ.
ಮೇ 28 ರಂದು ಸ್ಪೈಸ್ ಜೆಟ್ ಬೋಯಿಂಗ್ 737 ವಿಮಾನವು ಮುಂಬೈನಿಂದ ಗೋರಖ್ ಪುರಕ್ಕೆ ಹೊರಟಿತ್ತು. ಪ್ರಯಾಣದ ವೇಳೆ ವಿಮಾನದ ಮುಂದಿನ ಗ್ಲಾಸ್ ನಲ್ಲಿ ಬಿರುಕು ಆಗಿರುವುದನ್ನು ಪೈಲಟ್ ಗಮನಿಸಿದ್ದರು ಎಂದು ಸ್ಪೈಸ್ ಜೆಟ್ ವಿಮಾನ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.
ಬಿಪಿಎಲ್ ಕುಟುಂಬದವರು ಸೇರಿ ಗ್ರಾಮೀಣ ಮಹಿಳೆಯರಿಗೆ ತಿಂಗಳಿಗೆ 1 ರೂ.ಗೆ 10 ಸ್ಯಾನಿಟರಿ ನ್ಯಾಪ್ ಕಿನ್ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ
ಇದು ಗಮನಕ್ಕೆ ಬಂದ ತಕ್ಷಣ ಪೈಲಟ್ ವಿಮಾನಯಾನ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಅವರಿಂದ ಸೂಕ್ತ ಮಾರ್ಗದರ್ಶನ ಮತ್ತು ಸಲಹೆಗಳನ್ನು ಪಡೆದು ವಿಮಾನವನ್ನು ವಾಪಸ್ ಮುಂಬೈ ವಿಮಾನನಿಲ್ದಾಣಕ್ಕೆ ತಂದು ಇಳಿಸಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.
ವಿಮಾನವನ್ನು ಸುರಕ್ಷಿತವಾಗಿ ಮುಂಬೈ ವಿಮಾನನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ ಪೈಲಟ್ ಕಾರ್ಯಕ್ಷಮತೆಯನ್ನು ವಿಮಾನಿನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಶ್ಲಾಘಿಸಿದ್ದಾರೆ.