ಗುವಾಹಟಿ: ವಿಮಾನದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಪ್ರಯಾಣಿಕನನ್ನು ಸ್ಪೈಸ್ ಜೆಟ್ ಕೆಳಗಿಳಿಸಿರುವ ಘಟನೆ ವರದಿಯಾಗಿದೆ
ಗುವಾಹಟಿಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಸ್ಪೈಸ್‌ಜೆಟ್‌ನ ಎಸ್-G 8169 ನಲ್ಲಿ ಪ್ರಯಾಣಿಕನೊಬ್ಬ ತನ್ನ ಆಸನದಿಂದ ಎದ್ದು ಪದೇ ಪದೇ ಗಲಾಟೆ ಮಾಡಿದ್ದಾನೆ. ಇತರ ಪ್ರಯಾಣಿಕರು ಈ ವ್ಯಕ್ತಿಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ ಅಶಿಸ್ತು ತೋರಿದ ವ್ಯಕ್ತಿಯ ಜೊತೆ ವಿಮಾನದಲ್ಲಿ ಪ್ರಯಾಣಿಸಲು ಉಳಿದ ಪ್ರಯಾಣಿಕರು ಹಿಂದೇಟು ಹಾಕಿದ್ದಾರೆ. ಈ ಬಗ್ಗೆ ಸಿಬ್ಬಂದಿಗೆ ಇತರೆ ಪ್ರಯಾಣಿಕರು ದೂರು ನೀಡಿದ್ದಾರೆ. ಹೀಗಾಗಿ ಕೂಡಲೇ ಆತನನ್ನು ಕೆಳಗಿಳಿಸಿ ಗುವಾಹಟಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಆದರೆ, ವ್ಯಕ್ತಿ ಏನು ಮಾಡಿದ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.
ಗಲಾಟೆ ಮಾಡಿದ ವ್ಯಕ್ತಿಯನ್ನು ಸಮಾಧಾನ ಪಡಿಸಲು ಸಿಬ್ಬಂದಿ ಬಹಳ ಪ್ರಯತ್ನಪಟ್ಟಿದ್ದಾರೆ. ಆದರೆ, ಆತ ಸಕರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಇತರೆ ಪ್ರಯಾಣಿಕರು ತಾವು ಆತನ ಜೊತೆ ಪ್ರಯಾಣಿಸುವುದಿಲ್ಲ ಎಂದು ಸಿಬ್ಬಂದಿಗೆ ತಿಳಿಸಿದ್ದಾರೆ.
ಬಳಿಕ ಹಿಂತಿರುಗಿ ಬಂದ ವಿಮಾನವನ್ನು ಕೊಲ್ಲಿಯಲ್ಲಿ ಲ್ಯಾಂಡ್ ಮಾಡಲಾಯಿತು. ಅಲ್ಲಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಸ್ಪೈಸ್‌ಜೆಟ್ ಸಿಬ್ಬಂದಿಯೊಂದಿಗೆ ಪ್ರಯಾಣಿಕನನ್ನು ಕೆಳಗಿಳಿಸಿ ಸಿಐಎಸ್‌ಎಫ್ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಗೆ ಹಸ್ತಾಂತರಿಸಿದ್ದಾರೆ. ಬಳಿಕ ವಿಮಾನ ಹೊರಟಿದೆ.