ಕೊಚ್ಚಿ: 197 ಪ್ರಯಾಣಿಕರೊಂದಿಗೆ ಜೆಡ್ಡಾದಿಂದ ಬಂದ ಸ್ಪೈಸ್‌ಜೆಟ್ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಆರು ಸಿಬ್ಬಂದಿ ಸೇರಿದಂತೆ 197 ಪ್ರಯಾಣಿಕರೊಂದಿಗೆ ಜೆಡ್ಡಾದಿಂದ ಕೋಝಿಕ್ಕೋಡ್‌ಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ ಹೈಡ್ರಾಲಿಕ್ ವೈಫಲ್ಯದ ನಂತರ ಶುಕ್ರವಾರ ಕೊಚ್ಚಿನ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನಲ್ಲಿ(ಸಿಐಎಎಲ್) ತುರ್ತು ಭೂಸ್ಪರ್ಶ ಮಾಡಿದೆ, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವು ಜೆಡ್ಡಾದಿಂದ (ಸೌದಿ ಅರೇಬಿಯಾ) ಹೊರಟಿದ್ದು, ಕೋಝಿಕ್ಕೋಡ್ ವಿಮಾನ ನಿಲ್ದಾಣಕ್ಕೆ ತೆರಳಬೇಕಿತ್ತು. ಸ್ಪೈಸ್‌ಜೆಟ್-ಎಸ್‌ಜಿ 036 ವಿಮಾನವು ಕೆಲವು ಸಲಕರಣೆಗಳ ಅಸಮರ್ಪಕ ಕಾರ್ಯದಿಂದಾಗಿ ಕೊಚ್ಚಿಗೆ ತಿರುಗಿಸಿದ ನಂತರ ವಿಮಾನ ನಿಲ್ದಾಣ ಸಂಜೆ 6:29 ಕ್ಕೆ ತುರ್ತು ಪರಿಸ್ಥಿತಿ ಘೋಷಿಸಿತು.
ಕೊಚ್ಚಿ ವಿಮಾನ ನಿಲ್ದಾಣದಲ್ಲಿ 18:29 ಗಂಟೆಗೆ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ತುರ್ತು ಲ್ಯಾಂಡಿಂಗ್ ಪರಿಸ್ಥಿತಿಯ ನಂತರ ವಿಮಾನವು ರನ್‌ವೇಯಲ್ಲಿ 19.19 ಗಂಟೆಗೆ ಸುರಕ್ಷಿತವಾಗಿ ಇಳಿಯಿತು ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.