ಬೆಂಗಳೂರು: ಬೆಂಗಳೂರಿನಿಂದ ತೆರಳಬೇಕಿದ್ದ ಎರಡು ವಿಮಾನಗಳನ್ನು ಕೊನೇ ಕ್ಷಣದಲ್ಲಿ ಸ್ಪೈಸ್ ಜಟ್ ರದ್ದುಗೊಳಿಸಿದ ಪರಿಣಾಮ ಪ್ರಯಾಣಿಕರು ಪರದಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸ್ಪೈಸ್ ಜೆಟ್ ವಿಮಾನ ನಿನ್ನೆ ಸಂಜೆ ಹಾರಟ ನಡೆಸಬೇಕೆನ್ನುವ ಕೊನೇ ಕ್ಷಣದಲ್ಲಿ ವಿಮಾನ ರದ್ದು ಮಾಡಿದೆ. ಬೆಂಗಳೂರಿನಿಂದ ಪಾಟ್ನಾಗೆ ತೆರಳಲು ಟಿಕೆಟ್ ಬುಕ್ ಮಾಡಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಸಿಲುಕಿ ಪರದಾಡಿದ್ದಾರೆ.
ಕಾರಣಾಂತರಗಳಿಂದಾಗಿ ನಿನ್ನೆ ಸಂಜೆ ಸ್ಪೈಸ್ ಜೆಟ್ ಎಸ್ ಜಿ 531 ಹಾಗೂ 532 ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಇದರಿಂದಾಗಿ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಯಿತು. ಬಳಿಕ ಇಂದು ಬೆಳಿಗ್ಗೆ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ವಾಣಿಜ್ಯ ವಿಮಾನ ವ್ಯವಸ್ಥೆ ಮಾಡಿ ಕಳುಹಿಸಿಕೊಡಲಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿನ್ನೆ ಸಂಜೆ 5:20ಕ್ಕೆ ಪಾಟ್ನಾಗೆ ಹೊರಡಬೇಕಿದ್ದ ಎರಡು ವಿಮಾನ ಆರಂಭದಲ್ಲಿ ರಾತ್ರಿ 10 ಗಂಟೆಗೆ ವಿಳಂಬವಾಗಿ ಹೊರಡಲಿದೆ ಎಂದು ಹೇಳಲಾಗಿತ್ತು. ಆದರೆ ರಾತ್ರಿ 8ಗಂಟೆಗೆ ವಿಮಾನ ರದ್ದಾಗಿದೆ ಎಂದು ಹೇಳಿದ್ದಾರೆ. ಕೆಲ ಪ್ರಯಾಣಿಕರು ಹೋಟೆಲ್ ಗೆ ಹೋಗಿ ತಂಗಿದರೆ ಮತ್ತೆ ಕೆಲ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಕಾಲ ಕಳೆದಿದ್ದಾರೆ. ಬಳಿಕ ಇಂದು ಬೆಳಿಗ್ಗೆ 8 ಗಂಟೆಗೆ ವಿಮಾನ ಪಾಟ್ನಾಗೆ ಹಾರಾಟ ನಡೆಸಿದೆ ಎಂದು ತಿಳಿದುಬಂದಿದೆ.