ಎಕ್ಸ್‌ಪ್ರೆಸ್ ವೇಗಳಲ್ಲಿ ವೇಗದ ಗರಿಷ್ಠ ಮಿತಿಯನ್ನು 140 ಕಿಮೀ/ಗಂಟೆಗೆ ಏರಿಸುವ ಆಶಯ ತಮ್ಮದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ.
ವಿವಿಧ ವರ್ಗಗಳ ರಸ್ತೆಗಳಲ್ಲಿ ವೇಗದ ಮಿತಿಯಲ್ಲಿ ಹೆಚ್ಚಳ ತರುವ ಸಂಬಂಧ ಸಂಸತ್ತಿನಲ್ಲಿ ಶೀಘ್ರ ಕಾನೂನೊಂದನ್ನು ತರಲಾಗುವುದು ಎಂದು ಗಡ್ಕರಿ ತಿಳಿಸಿದ್ದಾರೆ.
ಈ ರಾಶಿಯ ಕೃಷಿಕರಿಗಿದೆ ಇಂದು ಎಲ್ಲಾ ಕಾರ್ಯಗಳಲ್ಲಿ ಲಾಭ
“ಎಕ್ಸ್‌ಪ್ರೆಸ್ ವೇಗಳಲ್ಲಿ ವಾಹನಗಳ ವೇಗದ ಗರಿಷ್ಠ ಮಿತಿಯನ್ನು 140 ಕಿಮೀ/ಗಂಟೆಗೆ ಏರಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ರಾಷ್ಟ್ರೀಯ ಹೆದ್ದಾರಿಗಳು ನಾಲ್ಕು ಪಥದ್ದಾಗಿದ್ದರೆ ಕನಿಷ್ಠ 100ಕಿಮೀ/ಗಂಟೆಯ ಮಿತಿ ಇಡಬೇಕು ಹಾಗೂ ದ್ವಿಪಥ ಮತ್ತು ನಗರಗಳ ರಸ್ತೆಗಳಲ್ಲಿ ತಲಾ 80 ಕಿಮೀ/ಗಂಟೆ ಹಾಗೂ 75 ಕಿಮೀ/ಗಂಟೆಯಷ್ಟು ವೇಗದ ಮಿತಿ ಇರಬೇಕು” ಎಂದು ಗಡ್ಕರಿ ಹೇಳಿದ್ದಾರೆ.
ತಾಯಿಯನ್ನು ಸೇರಲು ಮರಿಯಾನೆಗೆ ಬೆಂಗಾವಲಾದ ಅರಣ್ಯ ಇಲಾಖೆ ಸಿಬ್ಬಂದಿ: ಹೃದಯಸ್ಪರ್ಶಿ ವಿಡಿಯೋ ವೈರಲ್
“ಕಾರಿನ ವೇಗಗಳ ಸಂಬಂಧ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳ ಕೆಲವೊಂದು ನಿರ್ಧಾರಗಳ ಕಾರಣ ನಾವು ಏನೂ ಮಾಡಲು ಆಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ನಮಗೆ ಕಾನೂನುಗಳನ್ನು ಮಾಡುವ ಅಧಿಕಾರವಿದ್ದರೆ ನ್ಯಾಯಾಧೀಶರಿಗೆ ಅವುಗಳನ್ನು ವಿಶ್ಲೇಷಿಸುವ ಅಧಿಕಾರವಿದೆ,” ಎಂದ ಗಡ್ಕರಿ, “ದೇಶದಲ್ಲಿ ಎಂಥ ಎಕ್ಸ್‌ಪ್ರೆಸ್ ವೇಗಳ ನಿರ್ಮಾಣವಾಗುತ್ತಿದೆ ಎಂದರೆ ಬ್ಯಾರಿಕೇಡ್‌ಗಳನ್ನು ದಾಟಿ ನಾಯಿಗಳೂ ಸಹ ಒಳಬರಲು ಸಾಧ್ಯವಿಲ್ಲ,” ಎಂದಿದ್ದಾರೆ.